ಡಾಲರ್ ಎದುರು ರೂಪಾಯಿ ಮತ್ತಷ್ಟು ಚೇತರಿಕೆ: ಮೌಲ್ಯ 67 ಪೈಸೆಯಷ್ಟು ಏರಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಮತ್ತಷ್ಟು ಏರಿಕೆ ಕಂಡಿದ್ದು, ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 67 ಪೈಸೆಯಷ್ಟು ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಮತ್ತಷ್ಟು ಏರಿಕೆ ಕಂಡಿದ್ದು, ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 67 ಪೈಸೆಯಷ್ಟು ಏರಿಕೆಯಾಗಿದೆ.
ನಿನ್ನೆಯಷ್ಟೇ ರೂಪಾಯಿ ಮೌಲ್ಯದಲ್ಲಿ 29 ಪೈಸೆಯಷ್ಟು ಏರಿಕೆ ಕಂಡುಬಂದಿತ್ತು. ಅದೇ ಟ್ರೆಂಡ್ ಇಂದೂ ಕೂಡ ಮುಂದವರೆದಿದ್ದು, ಇಂದು ಮತ್ತೆ ರೂಪಾಯಿ ಮೌಲ್ಯದಲ್ಲಿ 67 ಪೈಸೆಯಷ್ಟು ಏರಿಕೆ ಕಂಡುಬಂದಿದೆ.
ಪ್ರಮುಖವಾಗಿ ಇಂದಿನ ಬೆಳವಣಿಗೆ ಕಚ್ಛಾ ತೈಲ ಬೆಲೆ ಇಳಿಕೆ ಮತ್ತು ಅಮೆರಿಕ ಷೇರುಮಾರುಕಟ್ಟೆಯಲ್ಲಿ ಹೂಡಿಕೆದಾರರ ನಿರಾಸಕ್ತಿಯೇ ಕಾರಣ ಎಂದು ಹೇಳಲಾಗುತ್ತಿದೆ. 
ಇನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರಲ್ ಕಚ್ಛಾ ತೈಲ ದರ ಒಂದು ವರ್ಷದ ಹಿಂದಿನ ಕನಿಷ್ಟ ದರಕ್ಕೆ ಕುಸಿದಿದೆ. ಇದು ರೂಪಾಯಿ ಮೌಲ್ಯ ಹೆಚ್ಚಾಗಲು ಕಾರಣ ಎಂದು  ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com