ಅರೆ ಇದು ನಾವು ಹೇಳುತ್ತಿರುವುದಲ್ಲ.. ಸ್ವತಃ ಅವರೇ ತಮಗೆ ಸ್ವಂತ ಕಾರಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ. ಹೌದು.. ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಇಂದು ಗಜ್ವೆಲ್ ವಿಧಾನಸಭಾ ಕ್ಷೇತ್ರದಿಂದ ಕೆಸಿಆರ್ ನಾಮಪತ್ರ ಸಲ್ಲಿಕೆ ಮಾಡಿದರು. ಜಿ್ಲಾಧಿಕಾರಿ ಸ್ಮಿತಾ ಸಬರ್ವಾಲ್ ಅವರಿಗೆ ಕೆಸಿಆರ್ ನಾಮಪತ್ರದೊಂದಿಗೆ ತಮ್ಮ ಆಸ್ತಿ ಘೋಷಣೆ ಕುರಿತ ಪ್ರಮಾಣಪತ್ರವನ್ನೂ ಸಲ್ಲಿಕೆ ಮಾಡಿದರು. ಈ ವೇಳೆ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿರುವ ಕೆಸಿಆರ್ ತಮ್ಮ ಬಳಿ ಒಟ್ಟು 22.61 ಕೋಟಿ ರೂ ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಬಳಿ ಸುಮಾರು 16 ಎಕರೆ ಕೃಷಿ ಭೂಮಿ ಇದ್ದು, ಸ್ವಂತ ಮನೆ ಇದೆ ಎಂದು ಹೇಳಿಕೊಂಡಿದ್ದಾರೆ.