ಕೊಚ್ಚಿ ಆಯ್ತು ಈಗ ಪುಣೆ ವಿಮಾನ ನಿಲ್ದಾಣದಲ್ಲೂ ತೃಪ್ತಿ ದೇಸಾಯಿಗೆ ಘೆರಾವ್

ಅಯ್ಯಪ್ಪ ದರ್ಶನಕ್ಕಾಗಿ ಕೇರಳಕ್ಕೆ ತೆರಳಿ ದರ್ಶನ ಸಿಗದೇ ವಾಪಸ್ ಆದ ಭೂಮಾತ ಬ್ರಿಗೇಡ್ ಸಂಸ್ಥಾಪಕಿ ತೃಪ್ತಿ ದೇಸಾಯಿಗೆ ಪುಣೆ ವಿಮಾನ ನಿಲ್ದಾಣದಲ್ಲೂ ಘೆರಾವ್ ಹಾಕಲಾಗಿದೆ.
ಪುಣೆ ವಿಮಾನ ನಿಲ್ದಾಣದಲ್ಲಿ ಅಯ್ಯಪ್ಪ ಭಕ್ತರಿಂದ ಪ್ರತಿಭಟನೆ
ಪುಣೆ ವಿಮಾನ ನಿಲ್ದಾಣದಲ್ಲಿ ಅಯ್ಯಪ್ಪ ಭಕ್ತರಿಂದ ಪ್ರತಿಭಟನೆ
ಪುಣೆ: ಅಯ್ಯಪ್ಪ ದರ್ಶನಕ್ಕಾಗಿ ಕೇರಳಕ್ಕೆ ತೆರಳಿ ದರ್ಶನ ಸಿಗದೇ ವಾಪಸ್ ಆದ ಭೂಮಾತ ಬ್ರಿಗೇಡ್ ಸಂಸ್ಥಾಪಕಿ ತೃಪ್ತಿ ದೇಸಾಯಿಗೆ ಪುಣೆ ವಿಮಾನ ನಿಲ್ದಾಣದಲ್ಲೂ ಘೆರಾವ್ ಹಾಕಲಾಗಿದೆ.
ತೃಪ್ತಿ ದೇಸಾಯಿ ಮತ್ತು ಅವರ ತಂಡ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ತೆರಳಿದ್ದನ್ನು ವಿರೋಧಿಸಿ ಮಹಾರಾಷ್ಟ್ರದ ಹಿಂದೂ ಪರಸಂಘಟನಗಳು ತೀವ್ರ ವಿರೋಧಿಸಿದ್ದು, ಪುಣೆ ವಿಮಾನ ನಿಲ್ದಾಣದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ತೃಪ್ತಿ ದೇಸಾಯಿ ವಿರುದ್ದ ಅಸಮಾಧಾನ ಹೊರಹಾಕಿದ ಹಿಂದೂ ಪರ ಕಾರ್ಯಕರ್ತರು, ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧವಿಲ್ಲ. ಆದರೆ ಅಲ್ಲಿ ಕೆಲ ನಿಯಮಗಳಿದ್ದು, 10 ವರ್ಷಕ್ಕಿಂತ ಕಡಿಮೆ ಮತ್ತು 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿದ್ದರೆ ಮಾತ್ರ ದರ್ಶನಕ್ಕೆ ಹೋಗಬಹುದು.
ತೃಪ್ತಿ ದೇಸಾಯಿ ಬೇಕಿದ್ದರೆ 50 ವರ್ಷವಾದ ಬಳಿಕ ದೇಗುಲಕ್ಕೆ ತೆರಳಿ ಅಯ್ಯಪ್ಪನ ದರ್ಶನ ಪಡೆಯಲಿ. ನಾವೇ ಅವರನ್ನು ಶಬರಿಮಲೆಗೆ ಕರೆದೊಯ್ಯುತ್ತೇವೆ. ಆದರೆ ಅವರು ಈಗ ಮಾಡುತ್ತಿರುವ ಪ್ರಯತ್ನಗಳು ಹಿಂದೂಗಳ ಭಾವನೆಗೆ ಧಕ್ಕೆ ತರುವಂತದ್ದು ಎಂದು ಪ್ರತಿಭಟನಾ ನಿರತ ಮಹಿಳೆಯೊಬ್ಬರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com