'ಮೋದಿ ಭಯ'ದಿಂದ ಪ್ರತಿಪಕ್ಷಗಳು ನರಳುತ್ತಿವೆ- ಅಮಿತ್ ಶಾ

ಪ್ರತಿಪಕ್ಷಗಳು ಮೋದಿ ಭಯದಿಂದ ನರಳುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ
Updated on: 

ಮಧ್ಯಪ್ರದೇಶ: ಪ್ರತಿಪಕ್ಷಗಳು ಮೋದಿ ಭಯದಿಂದ ನರಳುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ನರಸಿಂಗ್ ಪುರದಲ್ಲಿಂದು ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನೆಹರು-ಗಾಂಧಿಯ ಕುಟುಂಬದ ನಾಲ್ಕು ಕುಟುಂಬಗಳ ಆಡಳಿತದ ಸಂದರ್ಭದಲ್ಲಿ ದೇಶಕ್ಕಾಗಿ ಏನು ಮಾಡಿದ್ದಾರೆ ಎಂಬುದನ್ನು ಕಾಂಗ್ರೆಸ್ ಲೆಕ್ಕ ಕೊಡಲಿ ಎಂದರು.

ಪ್ರತಿಪಕ್ಷಗಳು ನರೇಂದ್ರ ಮೋದಿ ಭಯದಿಂದ ನರಳುತ್ತಿವೆ. ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ತೆಗೆಯಲು  ಕಾಯುತ್ತಿದ್ದಾರೆ. ಆದರೆ.ನಾವು ದೇಶದಲ್ಲಿನ ಬಡತನ, ಅಭದ್ರತೆ, ಮತ್ತು ವಾಯುಮಾಲಿನ್ಯ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ನಿರ್ಮೂಲನೆ ಮಾಡುವುದಾಗಿ ಹೇಳಿದರು.

ಮೋದಿ ಸರ್ಕಾರ ಕಳೆದ ನಾಲ್ಕುವರ್ಷಗಳಲ್ಲಿ 129 ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ತಿಳಿಸಿದರು.

ಇತ್ತೀಚಿನ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ 22 ನಿಮಿಷದ ಭಾಷಣದಲ್ಲಿ ಮೋದಿ ಹೆಸರನ್ನು 44 ಬಾರಿ ಹೇಳಿದ್ದಾರೆ. ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆಯೇ ಅಥವಾ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆಯೇ ಎಂಬುದು ಆಶ್ಚರ್ಯವನ್ನುಂಟುಮಾಡಿತು.
ಪಂಚ ರಾಜ್ಯಗಳ ಚುನಾವಣೆ ಮುಗಿಯುವದರೊಳಗೆ ವಿಶ್ವ ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನವನ್ನು ಅಲಂಕರಿಸಲಿದೆ ಎಂದು ಅಮಿತ್ ಶಾ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com