ಮಥುರಾ ರೈಲು ನಿಲ್ದಾಣದಲ್ಲಿ ಪವಾಡ ಸದೃಶ್ಯ: ರೈಲು ಚಲಿಸಿದ ಬಳಿಕವೂ ಬದುಕುಳಿದ ಬಾಲಕಿ!

ಮಥುರಾ ರೈಲು ನಿಲ್ದಾಣದಲ್ಲಿ ರೈಲು ಚಲಿಸಿದ ಬಳಿಕವೂ ಪವಾಡ ಸದೃಶ್ಯ ರೀತಿಯಲ್ಲಿ 1 ವರ್ಷದ ಬಾಲಕಿಯೊಬ್ಬಳು ಇಂದು ಪ್ರಾಣಪಾಯದಿಂದ ಪಾರಾಗಿದ್ದಾಳೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉತ್ತರ ಪ್ರದೇಶ : ಮಥುರಾ ರೈಲು ನಿಲ್ದಾಣದಲ್ಲಿ ರೈಲು ಚಲಿಸಿದ ಬಳಿಕವೂ  ಪವಾಡ ಸದೃಶ್ಯ ರೀತಿಯಲ್ಲಿ 1 ವರ್ಷದ ಬಾಲಕಿಯೊಬ್ಬಳು ಇಂದು ಪ್ರಾಣಪಾಯದಿಂದ ಪಾರಾಗಿದ್ದಾಳೆ.

ಆಕಸ್ಮತಾಗಿ  ಫ್ಲಾಟ್ ಫಾರಂನಿಂದ ಕೆಳಗೆ ಬಿದ್ದು, ಹಳಿಗೆ ಹೊಂದಿಕೊಂಡಂತೆ ಗೋಡೆ ಬದಿಯಲ್ಲಿ  ಸಿಲುಕಿಕೊಂಡಿದ್ದ ಬಾಲಕಿ ರೈಲು ಚಲಿಸಿದ ಬಳಿಕ ಸುರಕ್ಷಿತವಾಗಿ ಬದುಕುಳಿದಿದ್ದಾಳೆ.

ರೈಲು ಚಲಿಸಿದ ಕೂಡಲೇ ಕೆಳಗೆ ಧುಮುಕ್ಕಿದ ಸಹ ಪ್ರಯಾಣಿಕರು  ಆ  ಬಾಲಕಿಯನ್ನು ಎತ್ತಿಕೊಂಡಿದ್ದು,  ಪೋಷಕರ ಕೈಗೆ ನೀಡಿದ್ದಾರೆ. ಇದರಿಂದಾಗಿ ಉಸಿರು ಹೋದಂತಾಗಿದ್ದ ಪೋಷಕರ  ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com