ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: 24 ಗಂಟೆಗಳಲ್ಲಿ ತಮಿಳುನಾಡು, ಪಾಂಡಿಚೆರಿಯಲ್ಲಿ ಭಾರೀ ಮಳೆ ಸಾಧ್ಯತೆ

ಗಜ ಚಂಡಮಾರುತ ದುರ್ಬಲಗೊಳ್ಳುತ್ತಿದ್ದಂತೆಯೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಹಾಗೂ ಪಾಂಡಿಚೆರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ...
ಚೆನ್ನೈ: ಗಜ ಚಂಡಮಾರುತ ದುರ್ಬಲಗೊಳ್ಳುತ್ತಿದ್ದಂತೆಯೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಹಾಗೂ ಪಾಂಡಿಚೆರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಬುಧವಾರ ಹೇಳಿದ್ದಾರೆ. 
ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರತ ಕುಸಿತ ತಮಿಳುನಾಡು ಹಾಗೂ ಪಾಂಡಿಚೆರಿಯತ್ತ ಸಾಗಲಿದ್ದು, ಇದರ ಪರಿಣಾಮವಾಗಿ ಕರಾವಳಿ ಭಾಗಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ. 
ಮಾಧ್ಯಮಗಳೊಂದಿಗೆ ಮಾತನಾಡಿರುವ ಚೆನ್ನೈ ಹವಾಮಾನ ಇಲಾಖೆಯ ಜಂಟಿ ಉಪ ನಿರ್ದೇಶಕ ಎಸ್. ಬಾಲಚಂದ್ರನ್ ಅವರು, ತಮಿಳುನಾಡು ಹಾಗೂ ಪಾಂಡಿಚೆರಿಯಲ್ಲಿ ಸಾಧಾರಣ ಮಳೆ ಸಾಧ್ಯತೆಗಳಿವೆ. ಕೆಲ ಭಾಗಗಳಲ್ಲಿ ಮಾತ್ರ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆಗಳಿವೆ ಎಂದಿದ್ದಾರೆ. 
ಕಾಂಚೀಪುರಂ, ಪಾಂಡಿಚೆರಿ, ವಿಲ್ಲುಪುರಂ, ಕುಡ್ಡಲೊರ್, ತಿರುವಣ್ಣಾಮಲೈ, ನಾಗಪಟ್ಟಿನಂಮ್, ಕರೈಕಲ್, ಅರಿಯಲೂರ್ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. 
ಕಳೆದ 24 ಗಂಟೆಗಳಲ್ಲಿ ತಮಿಳುನಾಡು ಹಾಗೂ ಪಾಂಡಿಚೆರಿಯಲ್ಲಿ ಸಾಧಾರಣ ಮಳೆಯಾಗಿದ್ದು, ಸೆಂಗೊಟ್ಟೈ ಹಾಗೂ ತಿರುನೆಲ್ವೇಲಿ ಜಿಲ್ಲೆಗಳಲ್ಲಿ 8 ಸೆಂ.ಮೀಗಳಷ್ಟು ಮಳೆಯಾಗಿದೆ. 
ಈ ನಡುವೆ ತಮಿಳುನಾಡು ಹಾಗೂ ಮನ್ನಾರ್'ನ ಗಲ್ಫ್ ಬಳಿ ತೆರಳದಂತೆ ತಮಿಳುನಾಡು ಮೀನುಗಾರರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com