ಮೈತ್ರಿ ಸರ್ಕಾರದ ವೇಳೆ ಉಗ್ರ ವಿರೋಧಿಯಾಗಿದ್ದ ಪಿಡಿಪಿ, ಈಗ ಬಿಜೆಪಿಗೆ ಉಗ್ರರ ಸ್ನೇಹಿಯಾಯಿತೇ: ಫಾರೂಕ್ ಅಬ್ದುಲ್ಲಾ

ಮೈತ್ರಿ ಸರ್ಕಾರ ರಚನೆ ವೇಳೆ ಉಗ್ರರ ವಿರೋಧಿಯಾಗಿದ್ದ ಪಿಡಿಪಿ ಪಕ್ಷ ಈಗ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಂದಿಗೆ ಕೈ ಜೋಡಿಸಿದಾಕ್ಷಣ ಬಿಜೆಪಿ ಉಗ್ರರ ಸ್ನೇಹಿಯಾಯಿತೇ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಮೈತ್ರಿ ಸರ್ಕಾರ ರಚನೆ ವೇಳೆ ಉಗ್ರರ ವಿರೋಧಿಯಾಗಿದ್ದ ಪಿಡಿಪಿ ಪಕ್ಷ ಈಗ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಂದಿಗೆ ಕೈ ಜೋಡಿಸಿದಾಕ್ಷಣ ಬಿಜೆಪಿ ಉಗ್ರರ ಸ್ನೇಹಿಯಾಯಿತೇ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರ ಕ್ರಮಕ್ಕೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅವರು, ಕಾಶ್ಮೀರ ರಾಜ್ಯಪಾಲರ ಬಗ್ಗೆ ನಾನು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದೆ,  ಆದರೆ ಅವರೂ ಕೂಡ ಕೇಂದ್ರ ಸರ್ಕಾರದ ಒತ್ತೆಯಾಳಾಗಿದ್ದಾರೆ ಎಂಬುದು ನನಗೆ ಈಗ ತಿಳಿಯಿತು. ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಮುರಿದು  ತಿಂಗಳುಗಳು ಕಳೆದ ಬಳಿಕ ಈಗ ರಾಜ್ಯಪಾಲರಿಗೆ ವಿಧಾನಸಭೆ ವಿಸರ್ಜಿಸಬೇಕು ಎಂದೆನಿಸಿದೆ. ಇದರ ಹಿಂದೆ ಕೇಂದ್ರ ಸರ್ಕಾರ ಕೈವಾಡವಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾಜ್ಯಪಾಲ ಶಾಸಕರ ಕುದುರೆ ವ್ಯಾಪಾರದ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಒಮರ್ ಅಬ್ದುಲ್ಲಾ ಅವರು, ರಾಜ್ಯಪಾಲರ ಬಳಿ ಶಾಸಕರ ಕುದುರೆ ವ್ಯಾಪಾರದ ಕುರಿತು ಸಾಕ್ಷ್ಯಾಧಾರಗಳಿದ್ದರೆ ಬಹಿರಂಗ ಪಡಿಸಲಿ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com