ತಮ್ಮ ಪೋಷಕರ ಕುರಿತು ಕಾಂಗ್ರೆಸ್ ನಾಯಕರ ಟೀಕೆಗೆ ಪ್ರಧಾನಿ ಮೋದಿ ಕೊಟ್ರು ಉತ್ತರ!

ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಫಲ್ಯಗಳ ಬಗ್ಗೆ ಟೀಕೆ ಮಾಡುವ ಬದಲು ಕಾಂಗ್ರೆಸ್ ನ ಕೆಲವು ನಾಯಕರು ಮೋದಿ ವಿರುದ್ಧ ವೈಯಕ್ತಿಕ ವಾಗ್ದಾಳಿಗೆ ಇಳಿದಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on: 
ವಿದಿಶಾ: ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಫಲ್ಯಗಳ ಬಗ್ಗೆ ಟೀಕೆ ಮಾಡುವ ಬದಲು ಕಾಂಗ್ರೆಸ್ ನ ಕೆಲವು ನಾಯಕರು ಮೋದಿ ವಿರುದ್ಧ ವೈಯಕ್ತಿಕ ವಾಗ್ದಾಳಿಗೆ ಇಳಿದಿದ್ದಾರೆ. 
ರಾಜ್ ಬಬ್ಬರ್, ಸಿ.ಪಿ ಜೋಷಿ ಅವರ ನಂತರ ವಿಲಾಸ್ ಮುತ್ತೇಮ್ವಾರ್ ಅವರು ಪ್ರಧಾನಿ ಮೋದಿ ಅವರ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದರು. ರಾಜ್ ಬಬ್ಬರ್ ಮೋದಿ ವಿರುದ್ಧ ಟೀಕೆ ಮಾಡುವ ಭರದಲ್ಲಿ ಕುಸಿಯುತ್ತಿರುವ ರೂಪಾಯಿಯನ್ನು ಮೋದಿ ತಾಯಿ ಅವರ ವಯಸ್ಸಿಗೆ ಹೋಲಿಕೆ ಮಾಡಿದ್ದರೆ, ಕಾಂಗ್ರೆಸ್ ನ ಮಾಜಿ ಮಂತ್ರಿ ವಿಲಾಸ್ ಮುತ್ತೇಮ್ವಾರ್ ಪ್ರಧಾನಿ ಮೋದಿ ಅವರ ತಂದೆ ಬಗ್ಗೆ ಯಾರಿಗೂ ಹೆಚ್ಚು ಗೊತ್ತಿಲ್ಲ ಎಂದಿದ್ದರು. 
ನ.25 ರಂದು ವಿದಿಶಾದಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಪೋಷಕರ ಕುರಿತು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯೆ ನೀಡಿದ್ದು, " ನಾನು ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡಿಲ್ಲ. ಕುಟುಂಬದ ಸದಸ್ಯರು ಹುದ್ದೆಗಳನ್ನು ಅಲಂಕರಿಸಿದ್ದರ ಬಗ್ಗೆ ಟೀಕೆ ಮಾಡಿದ್ದೇನೆ. ನನ್ನ ಪೋಷಕರ ವಿರುದ್ಧ ಯಾಕೆ ಟೀಕೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. 
ಕಾಂಗ್ರೆಸ್ಸಿಗರಿಗೆ ಟೀಕೆ ಮಾಡುವುದಕ್ಕೆ ಬೇರೆ ವಿಷಯಗಳು ಸಿಗುತ್ತಿಲ್ಲ. ನನ್ನ ತಾಯಿಯ ವಿರುದ್ಧದ ಟೀಕೆ ಮಾಡಿದ ಬಳಿಕ 30 ವರ್ಷಗಳ ಹಿಂದೆಯೇ ಪ್ರಪಂಚ ತೊರೆದ ನನ್ನ ತಂದೆಯ ಹೆಸರನ್ನು ರಾಜಕೀಯಕ್ಕೆ ಎಳೆದುತಂದಿದ್ದಾರೆ ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ರಾಜಕೀಯದ ಬಗ್ಗೆ ಹೆಚ್ಚು ತಿಳಿಯದ ನನ್ನ ತಾಯಿಯ ಹೆಸರನ್ನು ರಾಜಕೀಯ ಟೀಕೆಗೆ ಎಳೆದು ತರುತ್ತಿದ್ದಾರೆ ಎಂದು ಮೋದಿ ಕಾಂಗ್ರೆಸ್ ನಾಯಕರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com