ಹೈದರಾಬಾದ್: ವಿವಾದಾತ್ಮಕ ಧರ್ಮ ಗುರು ಬಾಲ ಸಾಯಿಬಾಬಾ ವಿಧಿವಶ

ವಿವಾದಾತ್ಮಕ ಧರ್ಮ ಗುರು ಬಾಲ ಸಾಯಿಬಾಬಾ ಅವರು ಮಂಗಳವಾರ ಹೈದರಾಬಾದ್ ನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಾಲ ಸಾಯಿ ಬಾಬಾ
ಬಾಲ ಸಾಯಿ ಬಾಬಾ
Updated on: 
ಹೈದರಾಬಾದ್: ವಿವಾದಾತ್ಮಕ ಧರ್ಮ ಗುರು ಬಾಲ ಸಾಯಿಬಾಬಾ ಅವರು ಮಂಗಳವಾರ ಹೈದರಾಬಾದ್ ನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
58 ವರ್ಷದ ಬಾಬಾ ಅವರಿಗೆ ನಿನ್ನೆ ರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಬಂಜಾರ ಹಿಲ್ಸ್ ನ ವಿರಾಂಚಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಮೂಲತ ಕರ್ನೂಲ್ ಜಿಲ್ಲೆಯವರಾದ ಬಾಲ ಸಾಯಿಬಾಬಾ ಅವರು ಕಣ್ಣನೂರ್ ರಮಾನಂದ ಶಾಸ್ತ್ರಿ ಮತ್ತು ಜಯ ಲಕ್ಷ್ಮಮ್ಮ ಅವರ ಪುತ್ರ. ಅವರ ಮೂಲ ಹೆಸರು ಬಾಲರಾಜು. 18ನೇ ವಯಸ್ಸಿನಲ್ಲಿಯೇ ಸನ್ಯಾಸಿಯಾಗಿ ಆಶ್ರಮ ಸ್ಥಾಪಿಸಿ, ಬಾಲ ಸಾಯಿಬಾಬಾ ಎಂದೇ ಖ್ಯಾತಿ ಪಡೆದಿದ್ದರು.
ಬಾಲ ಸಾಯಿಬಾಬಾ ಅವರು ಎರಡು ಆಶ್ರಮಗಳನ್ನು ಹೊಂದಿದ್ದು, ಒಂದು ಕರ್ನೂಲ್ ನಲ್ಲಿ ಮತ್ತೊಂದು ಹೈದರಾಬಾದ್ ನಲ್ಲಿದೆ. ಅವರು ದೇಶ, ವಿದೇಶಗಳಲ್ಲೂ ಭಕ್ತರನ್ನು ಹೊಂದಿದ್ದರು.
ಬಾಲ ಸಾಯಿಬಾಬಾ ಅವರು ಪ್ರತಿ ವರ್ಷ ಶಿವರಾತ್ರಿಯ ದಿನದಂದು ತಮ್ಮ ಬಾಯಿಯಿಂದ ಶಿವಲಿಂಗವೊಂದನ್ನು ತೆಗೆದು ಭಕ್ತರಿಗೆ ನೀಡುತ್ತಿದ್ದರು. ಆದರೆ ಇದೊಂದು ಕೈಚಳಕ ಅಷ್ಟೆ ಎಂದು ಜನ ವಿಜ್ಞನಾ ವೇದಿಕೆ ಮತ್ತು ನಾಸ್ತಿಕರು ಟೀಕಿಸುತ್ತಿದ್ದರು. ಅಲ್ಲದೆ ಬಾಲ ಸಾಯಿಬಾಬಾ ವಿರುದ್ಧ ಭೂ ಒತ್ತುವರಿ ಮಾಡಿದ ಆರೋಪ ಸಹ ಇತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com