ಕರ್ತಾರ್ ಪುರ್ ಕಾರಿಡಾರ್ ಭಾರತ-ಪಾಕ್ ನಡುವಿನ ವೈರತ್ವ ಅಳಿಸಲಿದೆ: ಸಿಧು

ಕರ್ತಾರ್ ಪುರ್‌ ಕಾರಿಡಾರ್‌ ಭಾರತ-ಪಾಕಿಸ್ತಾನ ನಡುವಿನ ವೈರತ್ವ ಅಳಿಸಿ ಹಾಕಲಿದೆ ಮತ್ತು ಉಭಯ ದೇಶಗಳ ನಡುವೆ ಶಾಶ್ವತ ...
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
ಲಾಹೋರ್‌: ಕರ್ತಾರ್ ಪುರ್‌ ಕಾರಿಡಾರ್‌ ಭಾರತ-ಪಾಕಿಸ್ತಾನ ನಡುವಿನ ವೈರತ್ವ ಅಳಿಸಿ ಹಾಕಲಿದೆ ಮತ್ತು ಉಭಯ ದೇಶಗಳ ನಡುವೆ ಶಾಶ್ವತ  ಶಾಂತಿ ಮತ್ತು ಸಮೃದ್ಧಿಯನ್ನು ಹೊಂದುವ ಅಪರಿಮಿತ ಅವಕಾಶಗಳು ತೆರೆದುಕೊಳ್ಳಲಿದೆ ಎಂದು ಪಂಜಾಬ್‌ ಸಚಿವ ನವಜ್ಯೋತ್‌ ಸಿಂಗ್‌ ಸಿಧು ಅವರು ಮಂಗಳವಾರ ಹೇಳಿದ್ದಾರೆ.
ಸಿಧು ಅವರು ಭಾರತೀಯ ಪತ್ರಕರ್ತರೊಂದಿಗೆ ನಾಳೆ ಪಾಕಿಸ್ಥಾನದ ಕಡೆಯಿಂದ, ಪ್ರಧಾನಿ ಇಮ್ರಾನ್‌ ಖಾನ್‌ ಅವರು ನೆರವೇರಿಸಲಿರುವ ಕರ್ತಾರ್ ಪುರ್‌ ಕಾರಿಡಾರ್‌ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಾಹೋರ್ ಗೆ ಆಗಮಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಧು, ಕರ್ತಾರ್ ಪುರ್‌ ಕಾರಿಡಾರ್‌ ನಿಂದಾಗಿ ಭಾರತೀಯ ಸಿಕ್ಖರಿಗೆ ಪಾಕಿಸ್ಥಾನದ ರಾವಿ ನದಿ ತೀರದಲ್ಲಿರುವ ದರ್ಬಾರ್‌ ಸಾಹಿಬ್‌ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಸುವುದಕ್ಕೆ ಸುಲಭದ ಅವಕಾಶ ದೊರೆಯಲಿದೆ ಎಂದರು.
ಕರ್ತಾರ್ ಪುರ್ ಕಾರಿಡಾರ್‌  ಭಾರತ - ಪಾಕಿಸ್ಥಾನ ನಡುವೆ ಸ್ನೇಹ ಸೇತುವಾಗುವುದಲ್ಲದೆ ಹಳೆಯ ಕಹಿ ನೆನಪುಗಳನ್ನು ಅದು ಅಳಿಸಿ ಹಾಕಲಿದೆ ಎಂದು ಸಿಧು ಹೇಳಿದರು. 
ಕೇಂದ್ರ ಸರ್ಕಾರ ಕಳೆದ ವಾರ ಪಂಜಾಬ್‌ ನ ಗುರುದಾಸ್ ಪುರ ಜಿಲ್ಲೆಯಿಂದ ಅಂತಾರಾಷ್ಟ್ರೀಯ ಗಡಿಯ ವರೆಗೆ ತಾನು ಕಾರಿಡಾರ್‌ ಕಾಮಗಾರಿಯನ್ನು ಕೈಗೊಳ್ಳುವುದಾಗಿ ಹೇಳಿತ್ತು. ಆ ಪ್ರಕಾರ ಸೋಮವಾರ ಭಾರತದ ಕಡೆಯಿಂದ ಶಿಲಾನ್ಯಾಸ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com