ಅಯೋಧ್ಯೆ ವಿವಾದ: ತೀರ್ಪು ವಿಳಂಬದ ಮೂಲಕ ಸಂವಿಧಾನಕ್ಕೆ 'ಸುಪ್ರೀಂ' ಅಗೌರವ: ಆರ್ ಎಸ್ಎಸ್

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿರುದ್ಧ ಆರ್ ಎಸ್ಎಸ್ ತೀವ್ರ ಕಿಡಿಕಾರಿದ್ದು, ತೀರ್ಪು ವಿಳಂಬ ಮಾಡುವ ಮೂಲಕ ಸುಪ್ರೀಂ ಕೋರ್ಟ್ ಸಂವಿಧಾನಕ್ಕೆ ಅಗೌರವ ತೋರಿದೆ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿರುದ್ಧ ಆರ್ ಎಸ್ಎಸ್ ತೀವ್ರ ಕಿಡಿಕಾರಿದ್ದು, ತೀರ್ಪು ವಿಳಂಬ ಮಾಡುವ ಮೂಲಕ ಸುಪ್ರೀಂ ಕೋರ್ಟ್ ಸಂವಿಧಾನಕ್ಕೆ ಅಗೌರವ ತೋರಿದೆ ಎಂದು ಹೇಳಿದೆ.
ದಶಕಗಳಿಂದಲೂ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಅಯೋಧ್ಯೆ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿರುದ್ಧ ಆರ್ ಎಸ್ಎಸ್ ತೀವ್ರ ಕಿಡಿಕಾರಿದೆ. ಈ ಬಗ್ಗೆ ಮಾತನಾಡಿರುವ ಆರ್ ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರು, ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠ ತೀರ್ಪು ವಿಳಂಬ ಮಾಡುವ ಮೂಲಕ ಸಂವಿಧಾನಕ್ಕೆ ಅಗೌರ ತೋರುತ್ತಿದೆ ಎಂದು ಕಿಡಿಕಾರಿದ್ದಾರೆ. 
ಕಳೆದ ಅಕ್ಟೋಬರ್ 29ರಂದು ನಡೆದಿದ್ದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದ ಪ್ರಕರಣದ ವಿಚಾರಣೆಯನ್ನು ಜನವರಿ 2019ಕ್ಕೆ ಮುಂದೂಡಿತ್ತು. ಸಂವಿಧಾನವೇ ಹೇಳುತ್ತದೆ. ನ್ಯಾಯದಾನ ನಿಧಾನವಾದರೆ ನ್ಯಾಯ ತಿರಸ್ಕರಿಸಿದಂತೆ. ಹೀಗಾಗಿ ಸುಪ್ರೀಂ ಕೋರ್ಟ್ ನ ನಿಧಾನಗತಿಯ ವಿಚಾರಣೆ ನ್ಯಾಯದಾನವನ್ನು ತಿರಸ್ಕರಿಸಿದಂತೆ. ಆ ಮೂಲಕ ಕೋರ್ಟ್ ಸಂವಿಧಾನಕ್ಕೆ ಅಗೌರವ ತೋರುತ್ತಿದೆ ಎಂದು ಇಂದ್ರೇಶ್ ಹೇಳಿದ್ದಾರೆ.
'ನಾನು ಯಾವುದೇ ನ್ಯಾಯಮೂರ್ತಿಗಳ ಹೆಸರು ಹೇಳಲಿಚ್ಛಿಸುವುದಿಲ್ಲ. ಆದರೆ ನ್ಯಾಯದಾನವನ್ನು ವಿಳಂಬ ಮಾಡುವ ಮೂಲಕ ಅವರು ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಮಾನವಹಕ್ಕುಗಳಿಗೆ ಅಗೌರವ ತೋರಿದ್ದಾರೆ. ಆದರೆ ಮೋದಿ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದೆ ಎಂದು ಇಂದ್ರೇಶ್ ಕುಮಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com