ತೆಲಂಗಾಣ ಚುನಾವಣೆ: ಯಾಕೆ ಬ್ರದರ್, ಮನೆಯಲ್ಲಿ ತೃಪ್ತಿ ಸಿಗುತ್ತಿಲ್ಲವೇ?: ಬಿಜೆಪಿ ನಾಯಕ ರಾಜಾಗೆ ಓವೈಸಿ

ತೆಲಂಗಾಣ ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಬಿಜೆಪಿ ನಾಯಕ ರಾಜಾ ಸಿಂಗ್ ನಡುವೆ ವಾಕ್ಸಮರ ಆರಂಭವಾಗಿದೆ...
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಬಿಜೆಪಿ ನಾಯಕ ರಾಜಾ ಸಿಂಗ್
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಬಿಜೆಪಿ ನಾಯಕ ರಾಜಾ ಸಿಂಗ್
ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಬಿಜೆಪಿ ನಾಯಕ ರಾಜಾ ಸಿಂಗ್ ನಡುವೆ ವಾಕ್ಸಮರ ಆರಂಭವಾಗಿದೆ. 
ಓವೈಸಿ ತಲೆ ಕಡಿದ ನಂತರವೇ ನನಗೆ ತೃಪ್ತಿ ಸಿಗುತ್ತದೆ ಎಂದು ಬಿಜೆಪಿ ನಾಯಕ ರಾಜಾ ಸಿಂಗ್ ಅವರು ಹೇಳಿದ್ದರು. ರಾಜಾ ಸಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಓವೈಸಿ, ಯಾಕೆ ಸಹೋದರ? ಮನೆಯಲ್ಲಿ ನಿನಗೆ ತೃಪ್ತಿ ಸಿಗುತ್ತಿಲ್ಲವೇ ಎಂದು ಹೇಳಿದ್ದಾರೆ. 
ವಿಕರಾಬಾದ್ ಜಿಲ್ಲೆಯ ತಂದೂರ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಓವೈಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಕ್ಷಕ್ಕೆ ಸೇರಿದ ಅಭ್ಯರ್ಥಿಗಳು ನನ್ನ ತಲೆ ಕಡಿದು, ಕಾಲಿನ ಕೆಳಗೆ ಇಟ್ಟುಕೊಂಡರೆ ತೃಪ್ತಿ ಸಿಗುತ್ತದೆ ಎಂದು ಹೇಳಿದ್ದಾರೆ. ಮನೆಯಲ್ಲಿ ನಿಮಗೆ ತೃಪ್ತಿ ಸಿಗುತ್ತಿಲ್ಲ ಎಂದರೆ, ವೈದ್ಯರ ಬಳಿ ಹೋಗಿ. ಇಲ್ಲವೇ ತಜ್ಞರ ಬಳಿ ಹೋಗಿ. ತೃಪ್ತಿ ಪಡೆಯಲು ಸಾಕಷ್ಟು ದಾರಿಗಳಿವೆ. ಎಲ್ಲವನ್ನೂ ನಾನು ವಿವರಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. 
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರಶ್ನಿಸಿರುವ ಓವೈಸಿ, ನಿಮ್ಮ ಪಕ್ಷದ ಸದಸ್ಯ ಸಿಂಗ್ ಅವರ ಹೇಳಿಕೆಯನ್ನು ನಾವು ಒಪ್ಪಿಕೊಂಡಿದ್ದೇ ಆದರೆ, ಮುಂದಿನ ಬಾರಿ ನೀವು ಹೈದರಾಬಾದ್'ಗೆ ಬಂದಾಗ, ಭಾಷಣ ಮಾಡಿದಾಗ, ಸ್ಪಷ್ಟನೆ ನೀಡಬೇಕು. ಒಂದು ವೇಳೆ ನೀವು ಸ್ಪಷ್ಟನೆ ನೀಡದೇ ಹೋದಲ್ಲಿ ನೀವು ತೃಪ್ತಿ ಪಡುತ್ತಿಲ್ಲ ಎಂದು ನಾನು ಅರ್ಥ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ. 
ಓವೈಸಿ ಸಹೋದರ ಹಾಗೂ ಎಐಎಂಐಎಂ ನಾಯಕ ಮಾತನಾಡಿ, ಗಂಗೆಯ ಅಪವಿತ್ರತೆಗಿಂತಲೂ ಬಿಜೆಪಿ ಸಿದ್ಧಾಂತ ಅತ್ಯಂತ ಕೆಟ್ಟದಾಗಿದೆ. ಗಂಗೆ ಶುದ್ಧಿಗಾಗಿ ಬಿಜೆಪಿ ಸರ್ಕಾರ ರೂ.7,000 ಕೋಟಿ ಖರ್ಚು ಮಾಡಿದೆ. ನಾಲ್ಕು ವರ್ಷವಾದರೂ ಈಗಲು ಗಂಗೆ ಶುದ್ಧಿಗೊಂಡಿಲ್ಲ. ಬಿಜೆಪಿ, ಆರ್'ಎಸ್ಎಸ್, ಮೋದಿ ಹಾಗೂ ಮೋಹನ್ ಭಾಗವತ್ ಅವರ ಸಿದ್ಧಾಂತಗಳು ಅಪವಿತ್ರ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com