ದೆಹಲಿ ತಲುಪಿದ ಕಿಸಾನ್ ಕ್ರಾಂತಿ ಯಾತ್ರೆ ಅಂತ್ಯ; ಕೇಂದ್ರದ ವಿರುದ್ಧ ಪ್ರತಿಭಟನೆ ಮುಂದುವರಿಕೆ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಕಿಸಾನ್ ಕ್ರಾಂತಿ ಯಾತ್ರೆ ಬುಧವಾರ ಮುಂಜಾನೆ ಅಂತ್ಯವಾಗಿದೆ.
ಕಿಸಾನ್ ಕ್ರಾಂತಿ ಯಾತ್ರೆ
ಕಿಸಾನ್ ಕ್ರಾಂತಿ ಯಾತ್ರೆ
ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಕಿಸಾನ್ ಕ್ರಾಂತಿ ಯಾತ್ರೆ ಬುಧವಾರ ಮುಂಜಾನೆ ಅಂತ್ಯವಾಗಿದೆ.
ತಮ್ಮ ಬೆಳೆಗಳಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ನೀಡುವ ಬೇಡಿಕೆಯೂ ಸೇರಿದಂತೆ 15 ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಡೆದ ರೈತರ ಪ್ರತಿಭಟನಾ ರ್ಯಾಲಿ ಕೊನೆಗೂ ಮಧ್ಯರಾತ್ರಿ ವೇಳೆಗೆ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದ್ದು, 10 ದಿನಗಳ ಕಿಸಾನ್ ಕ್ರಾಂತಿ ಯಾತ್ರೆ ಕಿಸಾನ್ ಘಾಟ್ ನಲ್ಲಿ ಬುಧವಾರ ಬೆಳಗ್ಗೆ ಕೊನೆಗೊಂಡಿದೆ.
ಭಾರತೀಯ ಕಿಸಾನ್ ಯೂನಿಯನ್ ಕರೆನೀಡಿದ್ದ ಕಿಸಾನ್ ಕ್ರಾಂತಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ರೈತರನ್ನು ದೆಹಲಿ-ಉತ್ತರಪ್ರದೇಶ ಗಡಿಯಲ್ಲಿ ಪೊಲೀಸರು ತಡೆದಿದ್ದರು. ಈ ವೇಳೆ ಜಟಾಪಟಿ ನಡೆದು ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಪರಿಣಾಮ ಪೊಲೀಸರು ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ್ದರು. 
ಇದೀಗ ಕೊನೆಗೂ ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ದೆಹಲಿಗೆ ಬರವಂತೆ ಅನುಮತಿ ನೀಡಿತು. ಆದರೆ ರೈತರು ಬೆಳಗ್ಗೆ ಕಿಸಾನ್ ಘಾಟ್ ನಿಂದ ನಿರ್ಗಮಿಸಬೇಕು ಎಂದು ಸೂಚಿಸಿತ್ತು. ಸರ್ಕಾರದ ಷರತ್ತಿಗೆ ಒಪ್ಪಿದಗೆ ನೀಡಿರುವ ಕಿಸಾನ್ ಯೂನಿಯನ್ ದೆಹಲಿಗೆ ತೆರಳಿದ ಬಳಿಕ ತಮ್ಮ ಯಾತ್ರೆಯನ್ನು ಅಂತ್ಯಗೊಳಿಸಿವೆ.
ಪೊಲೀಸ್ ಆಯುಕ್ತ ಪಂಕಜ್ ಸಿಂಗ್, ಅವರು ಕೇಂದ್ರ ಸರಕಾರದ ಆದೇಶವನ್ನು ಅಧಿಕೃತವಾಗಿ ಹೇಳಿದರು. ನೂರಾರು ಟ್ರ್ಯಾಕ್ಟರ್ ಗಳಲ್ಲಿ ಆಗಮಿಸಿದ್ದ ರೈತರು ತಡರಾತ್ರಿ 1 ಗಂಟೆ ವೇಳೆಗೆ ದೆಹಲಿ ತಲುಪಿದರು. ಕಿಸಾನ್ ಘಾಟ್‍ಗೆ ಆಗಮಿಸಿದ ರೈತರ ಪ್ರತಿಭಟನಾ ರ್ಯಾಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇನ್ನು ರೈತ ಮುಖಂಡರೊಂದಿಗೆ ಸಂಧಾನ ಸಭೆ ನಡೆಸಿ ಅವರ 11 ಬೇಡಿಕೆಗಳ ಪೈಕಿ 7ಕ್ಕೆ ಕೇಂದ್ರ ಸಮ್ಮತಿ ನೀಡಿದೆ. ಉಳಿದ ಬೇಡಿಕೆಗಳ ಈಡೇರಿಕೆಗಾಗಿ ರೈತರು ಪಟ್ಟು ಹಿಡಿದಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಮಾತನಾಡುವ ಭರವಸೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com