ಎದೆ ಝಲ್ ಎನಿಸೋ ವಿಡಿಯೋ: ಆಯಾ ತಪ್ಪಿ ಕೆಳಗೆ ಬೀಳುತ್ತಿದ್ದ ಯುವತಿಯನ್ನು ದೇವರಂತೆ ಕಾಪಾಡಿದ ಸಹ ಪ್ರಯಾಣಿಕ

ಮುಂಬೈನ ಲೋಕಲ್ ರೈಲಿನಲ್ಲಿ ಸಹ ಪ್ರಯಾಣಿಕನ ಸಮಯ ಪ್ರಜ್ಞೆಯಿಂದ ಆಯಾ ತಪ್ಪಿ ಕೆಳಗೆ ಬೀಳುತ್ತಿದ್ದ ಯುವತಿಯ ಜೀವ ಉಳಿದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಮುಂಬೈನ ಲೋಕಲ್ ರೈಲಿನಲ್ಲಿ ಸಹ ಪ್ರಯಾಣಿಕನ ಸಮಯ ಪ್ರಜ್ಞೆಯಿಂದ ಆಯಾ ತಪ್ಪಿ ಕೆಳಗೆ ಬೀಳುತ್ತಿದ್ದ ಯುವತಿಯ ಜೀವ ಉಳಿದಿದೆ. 
ಸಹ ಪ್ರಯಾಣಿಕ ಅಚ್ಚರಿಯ ರೀತಿಯಲ್ಲಿ ಯುವತಿಯ ಪ್ರಾಣ ಉಳಿಸಿರುವು ವಿಡಿಯೋ ಇದೀಗ ವೈರಲ್ ಆಗಿದ್ದು ಸಹ ಪ್ರಯಾಣಿಕ ಭಾರೀ ಪ್ರಶಂಸೆಗೂ ಪಾತ್ರನಾಗಿದ್ದಾನೆ. 
ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ರೈಲಿನ ಬಾಗಿಲಲ್ಲಿ ಕಂಬಿ ಹಿಡಿದು ತುದಿಯಲ್ಲಿ ನಿಂತಿದ್ದಾಳೆ. ಕಿವಿಯಲ್ಲಿ ಇಯರ್ ಫೋನ್ ಹಾಕಿಕೊಂಡ ಯುವತಿ ಸಂಗೀತವನ್ನು ಆಸ್ವಾದಿಸುತ್ತಿದ್ದಳು. ಇದೇ ವೇಳೆ ಎದುರುಗಡೆಯಿಂದ ಮತ್ತೊಂದು ಟ್ರ್ಯಾಕ್ ನಲ್ಲಿ ರೈಲು ಸ್ಪೀಡಾಗಿ ಬರುತ್ತಿತ್ತು. ಎದುರಿನಿಂದ ಬರುತ್ತಿದ್ದ ರೈಲಿನ ವೇಗಕ್ಕೆ ಯುವತಿ ಬ್ಯಾಲೆನ್ಸ್ ತಪ್ಪಿ ಇನ್ನೇನು ಕೆಳಗೆ ಬೀಳಬೇಕು ಅಷ್ಟರಲ್ಲೇ ಅಲ್ಲೆ ಇದ್ದ ಸಹ ಪ್ರಯಾಣಿಕ ಯುವತಿಯ ಕೈ ಹಿಡಿದು ಒಳಕ್ಕೆ ಎಳೆದುಕೊಂಡಿದ್ದಾರೆ. 
ಕ್ಷಣಮಾತ್ರದಲ್ಲೇ ನಡೆದ ಈ ಘಟನೆಯನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com