ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆ ಕುಸಿತ!

ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕ ಕುಸಿತಗೊಂಡಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 73.34 ರೂಗೆ ಕುಸಿದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕ ಕುಸಿತಗೊಂಡಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 73.34 ರೂಗೆ ಕುಸಿದಿದೆ.
ಪದೇ ಪದೇ ರೂಪಾಯಿ ಮೌಲ್ಯ ಕುಸಿತದ ಹಿನ್ನಲೆಯಲ್ಲಿ ಅಕ್ಟೋಬರ್ ನಲ್ಲಿ ಆರ್ ಬಿಐ 36000 ಸಾವಿರ ಕೋಟಿ ರೂ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿದ್ದು, ಸರ್ಕಾರಿ ಬಾಂಡ್ ಗಳ ಹಿಂಪಡೆದಿತ್ತು. ಆ ಮೂಲಕ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿತ್ತು. ಇದಾಗ್ಯೂ ಡಾಲರ್ ಮೌಲ್ಯ ಕುಸಿತಕಂಡಿದೆ.
ಸತತ ನಾಲ್ಕನೇ ವಾರವೂ ಡಾಲರ್ ಮೌಲ್ಯ ಕುಸಿತಗೊಂಡಿದ್ದು, ವಿಶ್ವ ಮಾರುಕಟ್ಟೆಯಲ್ಲಿ ಏಷ್ಯನ್ ಮಾರುಕಟ್ಟೆಯಲ್ಲಿ ನೀರಸ ವಹಿವಾಟು ಇಂದಿನ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಮತ್ತೊಂದೆಡೆ ಇಟಲಿ ಮತ್ತು ರೋಮ್ ಬಜೆಟ್ ಮಂಡನೆ ಯೂರೋಪಿಯನ್ ಒಕ್ಕೂಟ ಮಾರುಕಟ್ಟೆಯಲ್ಲಿ  ಪರಿಣಾಮ ಬೀರಿದೆ.
ಮತ್ತೊಂದೆಡೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಏರಿಕೆ ಕೂಡ ರೂಪಾಯಿ ಮೌಲ್ಯಕ್ಕೆ ಕಾರಣ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com