ಜಮ್ಮು-ಕಾಶ್ಮೀರ: ಶ್ರೀನಗರದಲ್ಲಿ ಉಗ್ರರ ದಾಳಿ- 2 ನಾಗರೀಕರ ಸಾವು

ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಉಗ್ರರು ದಾಳಿ ನಡೆಸಿದ್ದು, ಉಗ್ರರ ಗುಂಡಿಗೆ 2 ನಾಗರೀಕರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ...
ಜಮ್ಮು-ಕಾಶ್ಮೀರ: ಶ್ರೀನಗರದಲ್ಲಿ ಉಗ್ರರ ದಾಳಿ- 2 ನಾಗರೀಕರ ಸಾವು
ಜಮ್ಮು-ಕಾಶ್ಮೀರ: ಶ್ರೀನಗರದಲ್ಲಿ ಉಗ್ರರ ದಾಳಿ- 2 ನಾಗರೀಕರ ಸಾವು
Updated on: 
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಉಗ್ರರು ದಾಳಿ ನಡೆಸಿದ್ದು, ಉಗ್ರರ ಗುಂಡಿಗೆ 2 ನಾಗರೀಕರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. 
ಶ್ರೀನಗರದ ಕರ್ಫಾಲಿ ಮೊಹಲ್ಲಾದಲ್ಲಿ ನಾಗರೀಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. 
ಇಂದು ಬೆಳಿಗ್ಗೆ ಕರ್ಫಾನಿ ಮೊಹಲ್ಲಾ ಬಳಿ ಬಂದಿರುವ ಉಗ್ರರು ನಾಗರೀಕರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಲೆ ಮೂವರು ನಾಗರೀಕರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಇಬ್ಬರು ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 
ಕಾಶ್ಮೀರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮೊದಲ ಹಂತದ ನಗರ ಸ್ಥಳೀಯ ಚುನಾವಣೆ ನಡೆಯಲಿದ್ದು, ಈ ನಡುವಲ್ಲೇ ಉಗ್ರರು ದಾಳಿ ನಡೆಸಿದ್ದಾರೆ.
ಪ್ರಸ್ತುತ ಸಾವನ್ನಪ್ಪಿರುವ ಇಬ್ಬರು ನಾಗರೀಕರು ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದು, ಈ ಕುರಿತಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಇಸ್ಮಾಯಿಲ್ ಪರ್ರೇ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com