ಇಡೀ ವಿಶ್ವದ ಗಮನ ಸೆಳೆದಿರುವ 'ಎಸ್-400 ಟ್ರಯಂಫ್' ವಿಶೇಷತೆಗಳೇನು?

ದೇಶದ ರಕ್ಷಣಾ ವ್ಯವಸ್ಥೆಗೆ ಶಕ್ತಿ ತುಂಬುವ ಭಾರತ-ರಷ್ಯಾ ನಡುವಿನ 'ಎಸ್-400 ಟ್ರಯಂಫ್' ಕ್ಷಿಪಣಿ ಒಪ್ಪಂದಕ್ಕೆ ಕೊನೆಗೂ ಭಾರತ ಹಾಗೂ ರಷ್ಯಾ ಸಹಿ ಹಾಕಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ದೇಶದ ರಕ್ಷಣಾ ವ್ಯವಸ್ಥೆಗೆ ಶಕ್ತಿ ತುಂಬುವ ಭಾರತ-ರಷ್ಯಾ ನಡುವಿನ ಎಸ್-400 ಟ್ರಯಂಫ್ ಕ್ಷಿಪಣಿ ಒಪ್ಪಂದಕ್ಕೆ ಕೊನೆಗೂ ಭಾರತ ಹಾಗೂ ರಷ್ಯಾ ಸಹಿ ಹಾಕಿದೆ. 
400 ಕಿ.ಮೀ ಅಂತರದಲ್ಲಿಯೇ ವೈರಿ ದೇಶಗಳ ಕ್ಷಿಪಣಿ, ವಿಮಾನ ಮತ್ತು ಮಾನವ ರಹಿತ ಹಾರುವ ಯಂತ್ರಗಳನ್ನು ನಾಶಪಡಿಸಬಲ್ಲ ಸುಮಾರು ರೂ.40 ಸಾವಿರ ಕೋಟಿ ಮೌಲ್ಯದ ಎಸ್-400 ಏರ್'ಡಿಫೆನ್ಸ್ ಸಿಸ್ಟಂ ಖರೀದಿಯ ಈ ಒಪ್ಪಂದ ಎಲ್ಲರ ಗಮನವನ್ನು ಸೆಳೆದಿದೆ. 
ಹಾಗಾದರೆ, ಎಸ್-400 ಟ್ರಯಂಫ್ ವಿಶೇಷತೆಗಳಾದರೂ ಏನೂ...? ಎಸ್-400 ಟ್ರಯಂಫ್ ವಿಶೇಷತೆಗಳ ಕುರಿತ ವಿವರ ಇಲ್ಲಿದೆ... 
ದೀರ್ಘ ದೂರ ಕ್ರಮಿಸಬಲ್ಲ ನೆಲದಿಂದ ಆಗಸಕ್ಕೆ ಉಡಾಯಿಸಬಹುದಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಇದಾಗಿದೆ. ರಷ್ಯಾ ಅಭಿವೃದ್ಧಿ ಪಡಿಸಿದ್ದು, 2007ರಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗಿತ್ತು. 
ಶತ್ರುಪಡೆಗಳ ಸಂಹಾರ ಮಾಡುವ ಕ್ರೂಸ್ ಕ್ಷಿಪಣಿ, ಮಾನವರಹಿತ ಮೈಮಾನಿಕ ನೌಕೆ (ಡ್ರೋನ್) ಗಳನ್ನು 400 ಕಿ.ಮೀ ದೂರದಿಂದಲೇ, 30 ಕಿ. ಮೀ ಎತ್ತರದಲ್ಲಿ ಎಸ್-400 ತಡೆಯುತ್ತದೆ. 
ಅಮೆರಿಕಾ ನಿರ್ಮೀತ ಎಪ್-35ನಂತಹ ಸೂಪರ್ ಫೈಟರ್ ಸೇರಿದಂತೆ 100 ವಾಯು ಗುರಿಗಳನ್ನು ಪತ್ತೆ ಹಚ್ಚಿ, ಆ ಪೈಕಿ ಆದರ ಜೊತೆ ನಿರಂತರ ಕಾದಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ರಾಡಾರ್, ಗುರಿ ಪತ್ತೆ, ಕ್ಷಿಪಣಿ, ಉಡಾವಣಾ ವ್ಯವಸ್ಥೆ, ನಿಯಂತ್ರಣ ವ್ಯವಸ್ಥೆ ಎಲ್ಲವೂ ಇರುತ್ತದೆ. ಹಂತಹಂತದ ಪ್ರತಿರೋಧಕ ವ್ಯವಸ್ಥೆ ಇದಾಗಿದ್ದು, ಮೂರು ಬಗೆಯ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ. 
ಅಮೆರಿಕಾದ ಬಳಿ 'ಥಾದ್' ಎಂಬ ವಾಯು ರಕ್ಷಣಾ ವ್ಯವಸ್ಥೆ ಇದ್ದು, ಅದಕ್ಕಿಂತ ರಷ್ಯಾದ ಎಸ್-400 ಹಲವು ವಿಷಯಗಳಲ್ಲಿ ಉತ್ತಮವಿದೆ. ದೇಶದ ಗಡಿ ಹಾಗೂ ನಗರಗಳನ್ನು ಎಸ್-400 ನಿಯೋಜಿಸಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com