ದೆಹಲಿ: ಎಎಪಿ ಸರ್ಕಾರ ಇಂಧನ ದರ ಇಳಿಸುವಂತೆ ಒತ್ತಾಯ: ಕೇಂದ್ರ ಸಚಿವ ಎತ್ತಿನ ಗಾಡಿ ಏರಿ ಪ್ರತಿಭಟನೆ !

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 81.82 ಹಾಗೂ ಡೀಸೆಲ್ ಬೆಲೆ 73.53 ರೂ ಆಗಿದ್ದು, ಕೇಂದ್ರ ಸಚಿವ ವಿಜಯ್ ಗೋಯಲ್ ನೇತೃತ್ವದಲ್ಲಿ ಇಂದು ಬಿಜೆಪಿ ವತಿಯಿಂದ ಎತ್ತಿನ ಗಾಡಿ ಏರಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ವಿಜಯ್ ಗೋಯಲ್
ಪ್ರತಿಭಟನೆಯಲ್ಲಿ ವಿಜಯ್ ಗೋಯಲ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್  ಬೆಲೆ ಲೀಟರಿಗೆ 81.82 ಹಾಗೂ ಡೀಸೆಲ್ ಬೆಲೆ 73.53 ರೂ ಆಗಿದ್ದು, ಕೇಂದ್ರ ಸಚಿವ ವಿಜಯ್ ಗೋಯಲ್ ನೇತೃತ್ವದಲ್ಲಿ ಇಂದು ಬಿಜೆಪಿ ವತಿಯಿಂದ ಎತ್ತಿನ ಗಾಡಿ ಏರಿ ಪ್ರತಿಭಟನೆ ನಡೆಸಲಾಯಿತು.

ಕೆಂಪು ಕೋಟೆಯಿಂದ ಚಾಂದಿನಿ ಚೌಕ್ ವರೆಗೂ ಎತ್ತಿನ ಗಾಡಿ ಮೆರವಣಿಯಲ್ಲಿ ಸಾಗಿದ ಬಿಜೆಪಿ ಕಾರ್ಯಕರ್ತರು ದೆಹಲಿ ಸರ್ಕಾರ ಇಂಧನ ಬೆಲೆ ಇಳಿಸುವಂತೆ ಒತ್ತಾಯಿಸಿದರು. ಸಚಿವರ ಬೆಂಬಲಿಗರು ಬಿತ್ತಿಪತ್ರಗಳನ್ನು ಪ್ರದರ್ಶಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರಸರ್ಕಾರ ಪ್ರತಿ ಲೀಟರ್  ತೈಲ ಬೆಲೆಯಲ್ಲಿ 2.50 ಪೈಸೆ ಕಡಿತಗೊಳಿಸಿದ್ದು, ನಂತರ ಎಲ್ಲಾ ರಾಜ್ಯಗಳಲ್ಲಿ ಅಬಕಾರಿ ಸುಂಕವನ್ನು ಲೀಟರಿಗೆ 1.5 ರೂಪಾಯಿ ಕಡಿತಗೊಳಿಸುವ ಘೋಷಣೆ ಮಾಡಿವೆ ಆದರೆ, ದೆಹಲಿ ಸರ್ಕಾರ ಇದನ್ನು ಮಾಡಿಲ್ಲ ಎಂದು ಸಚಿವರು  ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com