ವಿಧಿಯಾಟ ಘೋರ: ಅಗ್ನಿ ಅವಘಡದಲ್ಲಿ ನೂರಾರು ಜನರ ಜೀವ ಉಳಿಸಿ, ಕೊನೆಗೆ ಉಸಿರುಗಟ್ಟಿ ಸ್ವಾತಿ ದುರ್ಮರಣ!

ಗುರುಗ್ರಾಮ್ ನಲ್ಲಿನ ಟವರ್ ಬಿ6 ಅಪಾರ್ಟ್‌ಮೆಂಟ್‌ನಲ್ಲಿ ತಡರಾತ್ರಿ 2.30ರ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಈ ವೇಳೆ ಮಲಗಿದ್ದವರನ್ನು ಜೋರಾಗಿ ಕೂಗಿ...
ಸ್ವಾತಿ ಗಾರ್ಗ್
ಸ್ವಾತಿ ಗಾರ್ಗ್
Updated on
ಗುರುಗ್ರಾಮ್: ಗುರುಗ್ರಾಮ್ ನಲ್ಲಿನ ಟವರ್ ಬಿ6 ಅಪಾರ್ಟ್‌ಮೆಂಟ್‌ನಲ್ಲಿ ತಡರಾತ್ರಿ 2.30ರ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಈ ವೇಳೆ ಮಲಗಿದ್ದವರನ್ನು ಜೋರಾಗಿ ಕೂಗಿ ಎಚ್ಚರಿಸಿದ್ದ ಮಹಿಳೆ ಕೊನೆಗೆ ತಾನೇ ಬೆಂಕಿಗಾಹುತಿಯಾಗಿರುವ ದಾರುಣ ಘಟನೆ ನಡೆದಿದೆ. 
32 ವರ್ಷಧ ಸ್ವಾತಿ ಗಾರ್ಗ್ ಮೃತಪಟ್ಟ ಮಹಿಳೆ. ಕಳೆದ ರಾತ್ರಿ ಅಪಾರ್ಟ್ ಮೆಂಟ್ ನ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಸ್ವಾತಿ ಜೋರಾಗಿ ಕೂಗುತ್ತಾ ಎಲ್ಲರನ್ನು ಎಚ್ಚರಿಸಿದ್ದಾರೆ. ಕೂಡಲೇ ಹಲವರು ಫ್ಲಾಟ್ ಗಳಿಂದ ಹೊರಬಂದು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಆದರೆ ಸ್ವಾತಿ ಹೊರಬರುವ ವೇಳೆ ಡೋರ್ ಲಾಕ್ ಆಗಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. 
3 ಗಂಟೆ ಸುಮಾರಿಗೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ 10ನೇ ಮಹಡಿಯಲ್ಲಿದ್ದ ಸ್ವಾತಿಯನ್ನು ರಕ್ಷಿಸಿದ್ದಾರೆ. ಆದರೆ ಸ್ವಾತಿ ಅವರು ಪ್ರಜ್ಞೆತಪ್ಪಿದ್ದರಿಂದ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಸ್ವಾತಿ ಕೊನೆಯುಸಿರೆಳೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com