ಗಂಗಾ ನದಿಗಾಗಿ ಜೂ.22 ರಿಂದ ಉಪವಾಸವಿದ್ದ 87 ವರ್ಷದ ಜಿಡಿ ಅಗರ್ವಾಲ್ ನಿಧನ!

ಗಂಗಾ ನದಿ ರಕ್ಷಣೆಗಾಗಿ ಜೂ.22 ರಿಂದ ಉಪವಾಸವಿದ್ದ ಐಐಟಿ ಪದವೀಧರ, ಪ್ರೊಫೆಸರ್, ಸ್ವಾಮಿ ಜ್ಞಾನ್ ಸ್ವರೂಪ್ ಸನಂದ್ (ಪ್ರೊ ಜಿಡಿ ಅಗರ್ವಾಲ್) ಅ.11 ರಂದು ಇಹಲೋಕ ತ್ಯಜಿಸಿದ್ದಾರೆ.
ಪ್ರೊ.ಜಿ.ಡಿ ಅಗರ್ವಾಲ್
ಪ್ರೊ.ಜಿ.ಡಿ ಅಗರ್ವಾಲ್
Updated on
ರಿಷೀಕೇಶ: ಗಂಗಾ ನದಿ ರಕ್ಷಣೆಗಾಗಿ ಜೂ.22 ರಿಂದ  ಉಪವಾಸವಿದ್ದ ಐಐಟಿ ಪದವೀಧರ, ಪ್ರೊಫೆಸರ್, ಸ್ವಾಮಿ ಜ್ಞಾನ್ ಸ್ವರೂಪ್ ಸನಂದ್ (ಪ್ರೊ ಜಿಡಿ ಅಗರ್ವಾಲ್)  ಅ.11 ರಂದು ಇಹಲೋಕ ತ್ಯಜಿಸಿದ್ದಾರೆ. 
ರಿಷೀಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಜಿಡಿ ಅಗರ್ವಾಲ್ ಗಂಗಾ ನದಿ ಸ್ವಚ್ಛತೆಗಾಗಿ ಆಗ್ರಹಿಸಿ ಜೂ.22 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಪ್ರೊ.ಜಿ.ಡಿ ಅಗರ್ವಾಲ್ ಅವರ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದ ಸ್ವಾಮಿ ದಯಾನಂದ್ ಅವರು ನೀಡಿರುವ ಮಾಹಿತಿಯ ಪ್ರಕಾರ ಜಿಡಿ ಅಗರ್ವಾಲ್ ಅಥವಾ ಸ್ವಾಮಿ ಜ್ಞಾನ್ ಸ್ವರೂಪ್ ಸನಂದ್  ಅವರು ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. 
ಗಂಗಾ ನದಿ ಬಳಿ ನಡೆಸಲಾಗುತ್ತಿರುವ ಗಣಿಗಾರಿಕೆ ಹಾಗೂ ಹೈಡ್ರೋಪವರ್ ಯೋಜನೆಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಜೂ.22 ರಿಂದ ಆಮರಣಾಂತ ಉಪವಾಸ ಕೈಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com