ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾತ್ರಿ ವೇಳೆ ಫೋನ್, ವಾಟ್ಸಾಪ್, ಮೆಸೇಜ್ ಮಾಡಿ ಮತದಾರರಿಗೆ ತೊಂದರೆ ಕೊಡಬೇಡಿ: ಚುನಾವಣಾ ಆಯೋಗ ತಾಕೀತು

ಸಾಮಾಜಿಕ ಮಾಧ್ಯಮಗಳ ಮೂಲಕ ರಾಜಕೀಯ ಮುಖಂಡರು ಮತ್ತು ಪಕ್ಷಗಳು ಮತದಾರರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಚುನಾವಣಾ ಆಯೋಗ ಕೆಲವು ನಿಬಂಧನೆ ...
Published on

ನವದೆಹಲಿ: ಸಾಮಾಜಿಕ ಮಾಧ್ಯಮಗಳ ಮೂಲಕ ರಾಜಕೀಯ ಮುಖಂಡರು ಮತ್ತು ಪಕ್ಷಗಳು ಮತದಾರರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಚುನಾವಣಾ ಆಯೋಗ ಕೆಲವು ನಿಬಂಧನೆ ಹೇರಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜಕೀಯ ಸಂದೇಶಗಳು ಜನರ ಖಾಸಗಿತನಕ್ಕೆ ತೊಂದರೆಯಾಗಬಾರದು ಎಂದು ಹೇಳಿದೆ.

ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳು ಮಿತಿಮೀರಿ ಬಳಕೆಯಾಗುತ್ತಿರುವುದನ್ನು ಗಮನಿಸಿರುವ ಚುನಾವಣಾ ಆಯೋಗ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ರಾಜಕೀಯ ಪಕ್ಷಗಳಾಗಲಿ, ಅಭ್ಯರ್ಥಿಗಳಾಗಲಿ ಮತದಾರರಿಗೆ ಕರೆ ಮಾಡುವುದು, ಸಂದೇಶ ಕಳುಹಿಸುವುದು, ವಾಟ್ಸಾಪ್ ಮಾಡುವುದು ಇತ್ಯಾದಿಗಳನ್ನು ಮಾಡಬಾರದು ಎಂದು ಹೇಳಿದೆ.

ನಾಗರಿಕರ ಖಾಸಗಿತನವನ್ನು ಗೌರವಿಸಿ ಅವರ ಜೀವನಕ್ಕೆ ತೊಂದರೆ ನೀಡಬಾರದು ಎಂದು ಚುನಾವಣಾ ಆಯೋಗ ತಿಳಿಸಿದೆ. ಮತದಾರರ ಮನೆ ಮನೆಗೆ ತೆರಳುವುದು ಮತ್ತು ಧ್ವನಿವರ್ಧಕಗಳ ಬಳಕೆಯನ್ನು ಕೂಡ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಬಳಸುವುದಕ್ಕೆ ನಿಷೇಧ ಹೇರಿದೆ.

ಚುನಾವಣೆಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ಸುದ್ದಿ ನೀಡುವ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿರುವ ಚುನಾವಣಾ ಆಯೋಗ, ಸುದ್ದಿ ಮಾಧ್ಯಮಗಳು ರಾಜಕೀಯ ನಾಯಕರ ರೊಚ್ಚಿನ ಭಾಷಣಗಳನ್ನು ಅಥವಾ ಇತರ ಜಿಗುಪ್ಸೆ ಹುಟ್ಟಿಸುವ ರಾಜಕೀಯ ನಾಯಕರ ಮಾತುಗಳನ್ನು ಬಿತ್ತರಿಸಬಾರದು, ಇದರಿಂದ ಸಮಾಜದಲ್ಲಿ ಹಿಂಸೆ ಉಂಟಾಗಿ ಸಾರ್ವಜನಿಕರ ಶಾಂತಿಯುತ ಜೀವನಕ್ಕ ಧಕ್ಕೆಯುಂಟಾಗಬಹುದು, ಗಲಾಟೆ ಏಳುವ ಸಾಧ್ಯತೆಯಿದೆ ಎಂದು  ಎಚ್ಚರಿಕೆ ನೀಡಿದೆ.

ಜನರಲ್ಲಿ ದ್ವೇಷ, ಶತ್ರುಭಾವನೆ ಹುಟ್ಟಿಸುವ ಭಾಷಣಗಳನ್ನು ಸುದ್ದಿ ಮಾಧ್ಯಮಗಳು ಕಡ್ಡಾಯವಾಗಿ ಪ್ರಸಾರ ಮಾಡಬಾರದು, ಜಾತಿ, ಧರ್ಮ, ಪಂಥ, ಸಮುದಾಯ, ನಿರ್ದಿಷ್ಟ ಜನಾಂಗ, ಭಾಷೆಗಳ ಆಧಾರದ ಮೇಲೆ ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಜನರ ಭಾವನೆಗಳನ್ನು ಪ್ರಚೋದಿಸುವ ಸುದ್ದಿಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡದಂತೆ ಆಯೋಗ ಸುದ್ದಿ ಮಾಧ್ಯಮಗಳಿಗೆ ತಾಕೀತು ಮಾಡಿದೆ.

ಸೆಕ್ಷನ್ 126ರಲ್ಲಿ ಹೇಳಿರುವಂತೆ ಮತದಾನ ಮುಗಿದ 48 ಗಂಟೆಗಳಲ್ಲಿ ರೇಡಿಯೋ ಮತ್ತು ಸುದ್ದಿ ವಾಹಿನಿಗಳಲ್ಲಿ ಬಿತ್ತರಿಸುವ ರಾಜಕೀಯ ವಿಶ್ಲೇಷಣೆಗಳು, ಪರಿಣಿತರ ಅಭಿಪ್ರಾಯಗಳು ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳ ಭವಿಷ್ಯದ ಕುರಿತು ಪ್ರಚಾರ ಮಾಡುವ ರೀತಿ ಅಥವಾ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಬಾರದು. ಚುನಾವಣೋತ್ತರ ಫಲಿತಾಂಶಗಳು, ವಿಶ್ಲೇಷಣೆಗಳು, ಚರ್ಚೆಗಳು, ದೃಶ್ಯಗಳು ಮತ್ತು ಯಾರದ್ದಾದರೂ ಅಭಿಪ್ರಾಯಗಳು ಆಯೋಗ ಹೊರಡಿಸಿದ ಮಾರ್ಗಸೂಚಿಯ ಒಳಗೆಯೇ ಇರಬೇಕು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com