ದುರ್ಗಾಪೂಜೆಗೆ ಸರ್ಕಾರದ ಅನುದಾನ: ವಿವರಣೆ ನೀಡುವಂತೆ 'ದೀದಿ' ಸರ್ಕಾರಕ್ಕೆ ಸುಪ್ರೀಂ ನೊಟೀಸ್

ಪಶ್ಚಿಮ ಬಂಗಾಳದ 28 ಸಾವಿರ ದುರ್ಗ ಪೂಜಾ ಸಮಿತಿಗಳಿಗೆ 28 ಕೋಟಿ ರು ಅನುದಾನ ನೀಡಿರುವ ಸಂಬಂಧ ವಿವರಣೆ ನೀಡುವಂತೆ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
ನವದೆಹಲಿ: ಪಶ್ಚಿಮ ಬಂಗಾಳದ 28 ಸಾವಿರ ದುರ್ಗ ಪೂಜಾ ಸಮಿತಿಗಳಿಗೆ 28 ಕೋಟಿ ರು ಅನುದಾನ ನೀಡಿರುವ ಸಂಬಂಧ ವಿವರಣೆ ನೀಡುವಂತೆ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೊಟೀಸ್ ನೀಡಿದೆ.
ನ್ಯಾಯಾಮೂರ್ತಿಗಳಾದ ಮದನ್ ಬಿ ಲಾಕೂರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ ಪೂಜೀ ಸಮಿತಿಗಳಿಗೆ ಅನುದಾನ ನೀಡುವುದಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದಾರೆ, ಹಾಗೆಯೇ ಸರ್ಕಾರ ಅನುದಾನ ನೀಡಿರುವುದರ ಸಂಬಂಧ ವಿವರಣೆ ನೀಡುವಂತೆ ಸೂಚಿಸಿದೆ.
ಸಾರ್ವಜನಿಕರ ತೆರಿಗೆ ಹಣವನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂಬುದನ್ನು ಪ್ರಶ್ನಿಸಿ ವಕೀಲ ಸೌರವ್ ದತ್ ಎಂಬುವರು ಸುಪ್ರೀಂ ಕೊರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ ನೊಟೀಸ್ ಜಾರಿ ಮಾಡಿದೆ.
ಸೆಪ್ಟಂಬರ್ 10 ರಂದು ಸಿಎಂ ಮಮತಾ ಬ್ಯಾನರ್ಜಿ  28 ಸಾವಿರ ದುರ್ಗಾ ಪೂಜಾ ಸಮಿತಿಗಳಿಗೆ ಸರ್ಕಾರದಿಂದ 28 ಕೋಟಿ ರು ಹಣ ನೀಡುವುದಾಗಿ ಘೋಷಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com