ಮಲೇಷ್ಯಾದಲ್ಲೂ ಬರಲಿದೆ 'ಆಧಾರ್': ಈ ಯೋಜನೆಗೆ ಭಾರತದ ಮಾದರಿಯೇ ಆಧಾರ!

ಭಾರತದ ಮಾದರಿಯನ್ನೇ ಅನುಸರಿಸಿ ಮಲೇಷ್ಯಾ ಸಹ ಆಧಾರ್ ರೀತಿಯ ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ.
ಮಲೇಷ್ಯಾದ ಆಧಾರ್ ಯೋಜನೆಗೆ ಭಾರತವೇ ಮಾದರಿ
ಮಲೇಷ್ಯಾದ ಆಧಾರ್ ಯೋಜನೆಗೆ ಭಾರತವೇ ಮಾದರಿ
Updated on: 
ನವದೆಹಲಿ: ಭಾರತದ ಮಾದರಿಯನ್ನೇ ಅನುಸರಿಸಿ ಮಲೇಷ್ಯಾ ಸಹ ಆಧಾರ್ ರೀತಿಯ ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ. 
ಪ್ರಸ್ತುತ ಇರುವ ರಾಷ್ಟ್ರೀಯ ಗುರುತು ಚೀಟಿಯಲ್ಲಿ ಬದಲಾವಣೆ ತರುವುದಕ್ಕೆ ಚಿಂತನೆ ನಡೆಸಿರುವ ಮಲೇಷ್ಯಾ, ಸರ್ಕಾರಿ ಯೋಜನೆಗಳು ನಕಲಿ ಫಲಾನುಭವಿಗಳಿಗೆ  ತಲುಪದಂತೆ ಮಾಡುವುದಕ್ಕೆ ಭಾರತದ ಆಧಾರ್ ಮಾದರಿಯಲ್ಲಿ ಗುರುತಿನ ಚೀಟಿ ವಿತರಣೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. 
ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಕೌಲಲಾಂಪುರ್ ಗೆ ಭೇಟಿ ನೀಡಿದ್ದಾಗ ಅಲ್ಲಿನ ಪ್ರೀಮಿಯರ್ ಗೆ ಆಧಾರ್ ಕ್ರಮದ ಬಗ್ಗೆ ಭಾರತ ಮಲೇಷ್ಯಾಗೆ ಸಹಕಾರ ನೀಡುವ ಭರವಸೆ ನೀಡಿದ್ದರು. ಅದಂತೆಯೇ ಈಗ ಭಾರತದ ಮಾದರಿಯಲ್ಲಿ ಮಲೇಷ್ಯಾ ಆಧಾರ್ ಯೋಜನೆಯನ್ನು ಜಾರಿಗೊಳಿಸಲು ಅಲ್ಲಿನ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಆಧಾರ್ ಯೋಜನೆಯ ಅಧ್ಯಯನಕ್ಕಾಗಿ ಕಳೆದ ವಾರ ಮಲೇಷ್ಯಾದ ಮಾನವ ಸಂಪನ್ಮೂಲ ಇಲಾಖೆ ಸಚಿವರು ಅಧಿಕಾರಿಗಳೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದರು. 
ಭಾರತ ಭೇಟಿ ವೇಳೆಯಲ್ಲಿ ಆಧಾರ್ ನಲ್ಲಿರುವ ಯಾವೆಲ್ಲಾ ಅಂಶಗಳನ್ನು ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ಇಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ ಅವರೂ ಇದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com