ಪಲ್ವಾಲ್: ಕುಖ್ಯಾತ ಉಗ್ರಗಾಮಿ ಮುಖಂಡ ಹಫೀಜ್ ಸಯೀದ್'ನ ಲಷ್ಕರ್ ಎ ತೊಯ್ಬಾ ಸಂಘಟನೆಯು ಭಾರತದಲ್ಲಿ ಮಸೀದಿಗಳನ್ನು ಕಟ್ಟಲು ಹಣ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಶಂಕಿತ ಲಷ್ಕರ್ ಎ ತೊಯ್ಬಾದ ಮೂವರು ಉಗ್ರರು ಪೊಲೀಸರು ಬಂಧಿಸಿದಾಗ ಅವರಿಂದ ಈ ಆತಂಕಕಾರಿ ಮಾಹಿತಿ ಮಾಹಿತಿ ಬೆಳಕಿಗೆ ಬಂದಿದೆ.
ಪಲ್ವಾಲ್ ಜಿಲ್ಲೆಯ ಉತ್ತಾವರ ಗ್ರಾಮದ ಖುಲಾಫಾ ಎ ರಶಿದೀನ್ ಎಂಬ ಮಸೀದಿಯ ಮೇಲೆ 'ಟೆರರ್ ಫಂಡಿಂಗ್' ಗುಮಾನಿಯ ಇದ್ದು, ಈ ಸುಳಿವಿನ ಮೇರೆಗೆ ಅಕ್ಟೋಬರ್ 3ರಂದು ದಿಲ್ಲಿಯಲ್ಲಿ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ದಾಳಿ ನಡೆಸಿತ್ತು.
ಆಗ ಮಸೀದಿಯ ಮೌಲ್ವಿ ಸಲ್ಮಾನ್ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಸಲ್ಮಾನ್, 'ಲಷ್ಕರ್'ನಿಂದ ಹರಿದು ಬಂದ ನಿಧಿಯಿಂದ ಮಸೀದಿ ನಿರ್ಮಿಸಲಾಗಿದೆ. ಸುಮಾರು ರೂ.70 ಲಕ್ಷಗಳನ್ನು ಲಷ್ಕರ್ ನೀಡಿದೆ' ಎಂದು ಆತ ತಿಳಿಸಿದ್ದಾನೆಂದು ಮೂಲಗಳು ಹೇಳಿವೆ.