2014ರಲ್ಲಿ ಮೋದಿ ಗೆಲುವಿನ ರೂವಾರಿ ಪ್ರಶಾಂತ್ ಕಿಶೋರ್ ಈಗ ಜೆಡಿಯು ಉಪಾಧ್ಯಕ್ಷ

2014ರಲ್ಲಿ ಬಿಜೆಪಿ ಮತ್ತು ಮೋದಿ ಗೆಲುವಿನ ರೂವಾರಿಯಾಗಿದ್ದ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಇದೀಗ ಜೆಡಿಯು ಪಕ್ಷದ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಾಟ್ನಾ: 2014ರಲ್ಲಿ ಬಿಜೆಪಿ ಮತ್ತು ಮೋದಿ ಗೆಲುವಿನ ರೂವಾರಿಯಾಗಿದ್ದ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಇದೀಗ ಜೆಡಿಯು ಪಕ್ಷದ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಿಹಾರ ಸಿಎಂ ಹಾಗೂ ಜೆಡಿಯು ಪಕ್ಷದ ಅಧಿನಾಯಕ ನಿತೀಶ್ ಕುಮಾರ್ ಅವರ ಆಯ್ಕೆಯಂತೆ ಜೆಡಿಯು ಉಪಾಧ್ಯಕ್ಷರಾಗಿ ಪ್ರಶಾಂತ್ ಕಿಶೋರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ವಕ್ತಾರ ಕೆಸಿ ತ್ಯಾಗಿ ಹೇಳಿದ್ದಾರೆ.
ಕಳೆದ ತಿಂಗಳಷ್ಟೇ ಪ್ರಶಾಂತ್ ಕಿಶೋರ್ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಪಾಟ್ನಾದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಿಶೋರ್ ನಿತೀಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಜೆಡಿಯುಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು.
ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ ದೇಶದೆಲ್ಲೆಡೆ ಮೋದಿ ಅಲೆ ಏಳುವಂತೆ ಮಾಡಿದ್ದ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ನಂತರ ಬಿಜೆಪಿ ತೊರೆದು ಬಿಹಾರದಲ್ಲಿ ಇದೇ ಬಿಜೆಪಿ ವಿರುದ್ಧ ಕಾರ್ಯನಿರ್ವಹಿಸಿದ್ದರು. 
ಬಳಿಕ ಪ್ರಶಾಂತ್ ಕಿಶೋರ್ ರಾಜಕೀಯ ಸೇರ್ಪಡೆ ಕುರಿತು ಸಾಕಷ್ಟು ಚರ್ಚೆಗಳು ಎದ್ದಿದ್ದವು. ತಮ್ಮದೇ ಸ್ವಂತ ಪಕ್ಷ ಕಟ್ಟುವ ಕುರಿತು ಪ್ರಶಾಂತ್ ಕಿಶೋರ್ ಆಲೋಚಿಸುತ್ತಿದ್ದಾರೆ ಎಂದೂ ಸುದ್ದಿಗಳು ಕೇಳಿಬಂದಿದ್ದವು. ಈ ಎಲ್ಲೂ ಊಹಾಪೋಹಗಳಿಗೂ ತೆರೆ ಎಳಿದಿದ್ದ ಪ್ರಶಾಂತ್ ಕಿಶೋರ್ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com