ಫೆಮಾ ನಿಯಮ ಉಲ್ಲಂಘನೆ: ಎನ್ ಡಿಟಿವಿಗೆ ಜಾರಿನಿರ್ದೇಶನಾಲಯ ನೋಟಿಸ್

ರಾಫೆಲ್ ಕುರಿತು ವರದಿ ಬಿತ್ತರಿಸಿ ಅನಿಲ್ ಅಂಬಾನಿಯಿಂದ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಎನ್ ಡಿವಿಗೆ ಇದೀಗ ಜಾರಿ ನಿರ್ದೇಶನಾಲಯ ಕೂಡ ಶಾಕ್ ನೀಡಿದ್ದು, ಫೆಮಾ ನಿಯಮ ಉಲ್ಲಂಘನೆ ಆರೋಪದಡಿಯಲ್ಲಿ ಜಾರಿನಿರ್ದೇಶನಾಲಯ ನೋಟಿಸ್ ನೀಡಲಾಗಿದೆ.
ಎನ್ ಡಿಟಿವಿ ಮುಖ್ಯಸ್ಥ ಪ್ರಣಯ್ ರಾಯ್ (ಸಂಗ್ರಹ ಚಿತ್ರ)
ಎನ್ ಡಿಟಿವಿ ಮುಖ್ಯಸ್ಥ ಪ್ರಣಯ್ ರಾಯ್ (ಸಂಗ್ರಹ ಚಿತ್ರ)
ನವದೆಹಲಿ: ರಾಫೆಲ್ ಕುರಿತು ವರದಿ ಬಿತ್ತರಿಸಿ ಅನಿಲ್ ಅಂಬಾನಿಯಿಂದ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಎನ್ ಡಿಟಿವಿಗೆ ಇದೀಗ ಜಾರಿ ನಿರ್ದೇಶನಾಲಯ ಕೂಡ ಶಾಕ್ ನೀಡಿದ್ದು, ಫೆಮಾ ನಿಯಮ ಉಲ್ಲಂಘನೆ ಆರೋಪದಡಿಯಲ್ಲಿ ಜಾರಿನಿರ್ದೇಶನಾಲಯ ನೋಟಿಸ್ ನೀಡಲಾಗಿದೆ.
ಮೂಲಗಳ ಪ್ರಕಾರ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ಮೊತ್ತದ ವಿದೇಶಿ ವಿನಿಮಯವನ್ನು ಕಾನೂನು ಬಾಹಿರವಾಗಿ ನಡೆಸಲಾಗಿದೆ ಎಂಬ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯ ಖಾಸಗಿ ಸುದ್ದಿವಾಹಿನಿಯಾದ ಎನ್ ಡಿಟಿವಿಗೆ ಶೋಕಾಸ್ ನೋಟಿಸ್ ನೀಡಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಜಾರಿ ನಿರ್ದೇಶನಾಲಯ, 'ಎನ್‌ಡಿಟಿವಿ ಸ್ವೀಕರಿಸಿರುವ ಸುಮಾರು 1637 ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆಯಲ್ಲಿ ವಿದೇಶಿ ವಿನಿಮಯ ಕಾಯ್ದೆಯನ್ನು ಉಲ್ಲಂಘಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಜತೆಗೆ 2732 ಕೋಟಿ ರೂಪಾಯಿ ಸಾಗರೋತ್ತರ ಹೂಡಿಕೆಗೆ ಸಂಬಂಧಿಸಿದಂತೆಯೂ ಕಾನೂನು ಉಲ್ಲಂಘನೆಯಾಗಿದೆ' ಎಂದು ಹೇಳಿದೆ.
ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ)ಯಡಿ ಎನ್ ಡಿಟಿವಿ ಸಂಸ್ಥೆಯ ಕಾರ್ಯನಿರ್ವಾಹಕ ಸಹ ಅಧ್ಯಕ್ಷರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್, ಪತ್ರಕರ್ತ ವಿಕ್ರಮ್ ಚಂದ್ರ ಸೇರಿದಂತೆ ಇತರ ಕೆಲವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮೆಸಸ್ ಎನ್‌ಡಿಟಿವಿ ಲೈಫ್‌ಸ್ಟೈಲ್ ಹೋಲ್ಡಿಂಗ್ಸ್ ಲಿಮಿಟೆಡ್ (ಈಗ ಮೆಸಸ್ ಲೈಫ್‌ಸ್ಟೈಲ್ ಆ್ಯಂಡ್ ಮೀಡಿಯಾ ಹೋಲ್ಡಿಂಗ್ಸ್ ಲಿಮಿಟೆಡ್), ಮೆಸಸ್ ಸೌತ್ ಏಷ್ಯಾ ಕ್ರಿಯೇಟಿವ್ ಅಸೆಟ್ಸ್ ಲಿಮಿಟೆಡ್, ಮೆಸಸ್ ಆಸ್ಟ್ರೊ ಓವರ್‌ಸೀಸ್ ಲಿಮಿಟೆಡ್ ಮತ್ತು ಮೆಸಸ್ ಎನ್‌ಡಿಟಿವಿ ಇಮೇಜಿನ್ ಲಿಮಿಟೆಡ್ (ಈಗ ಮೆಸಸ್ ಟರ್ನರ್ ಜನರಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್) ಕಂಪನಿಗಳು ಕಾಯ್ದೆ ಉಲ್ಲಂಘಿಸಿವೆ ಎಂದು ಆಪಾದಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com