4 ವರ್ಷಗಳ ಆಡಳಿತದಲ್ಲಿ ನಮ್ಮ ಸರ್ಕಾರ 1.25 ಕೋಟಿ ಗೃಹ ನಿರ್ಮಾಣ ಮಾಡಿದೆ: ಶಿರಡಿಯಲ್ಲಿ ಪ್ರಧಾನಿ ಮೋದಿ

ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿಂದಿದ್ದ ಸರ್ಕಾರ ತನ್ನ ಇಡೀ ಆಡಳಿತಾವಧಿಯಲ್ಲಿ ಕೇವಲ 25 ಲಕ್ಷ ಗೃಹ ನಿರ್ಮಾಣ ಮಾಡಿರುವುದಾಗಿ ಹೇಳಿಕೊಂಡಿತ್ತು. ಆದರೆ, ನಮ್ಮ ಸರ್ಕಾರ 4 ವರ್ಷದ ಅಧಿಕಾರಾವಧಿಯಲ್ಲಿ 1.25 ಕೋಟಿ ಗೃಹ ನಿರ್ಮಾಣ...
ಶಿರಡಿಯಲ್ಲಿ ಪ್ರಧಾನಿ ಮೋದಿ
ಶಿರಡಿಯಲ್ಲಿ ಪ್ರಧಾನಿ ಮೋದಿ
ಶಿರಡಿ: ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿಂದಿದ್ದ ಸರ್ಕಾರ ತನ್ನ ಇಡೀ ಆಡಳಿತಾವಧಿಯಲ್ಲಿ ಕೇವಲ 25 ಲಕ್ಷ ಗೃಹ ನಿರ್ಮಾಣ ಮಾಡಿರುವುದಾಗಿ ಹೇಳಿಕೊಂಡಿತ್ತು. ಆದರೆ, ನಮ್ಮ ಸರ್ಕಾರ 4 ವರ್ಷದ ಅಧಿಕಾರಾವಧಿಯಲ್ಲಿ 1.25 ಕೋಟಿ ಗೃಹ ನಿರ್ಮಾಣ ಮಾಡಿದೆ ಎಂದು ಶುಕ್ರವಾರ ಹೇಳಿದ್ದಾರೆ. 
ಸಾಯಿಬಾಬ 100ನೇ ಜಯಂತಿ ಸಮಾರೋಪ ಸಮಾರಂಭ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಶಿರಡಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರು ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ದೇಶದೆಲ್ಲೆಡೆ ಇಂದು ದಸರಾ ಹಬ್ಬವನ್ನು ಆಚರಿಸಲಾಗುತ್ತಿದ್ದು, ದಸರಾ ಹಬ್ಬದ ಹಿನ್ನಲೆಯಲ್ಲಿ ಶಿರಡಿಗೆ ಆಗಮಿಸಿದ್ದ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾಗಿರುವ 2,44,444 ಜನರಿಗೆ ಮನೆಗಳ ಬೀಗಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. 
ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಂತ ಮನೆ ಜೀವನವನ್ನು ಸುಲಭವಾಗಿಸುತ್ತದೆ. ಬಡತನದ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ಇದನ್ನು ಗಮನದಲ್ಲಿಟ್ಟು ಸರ್ಕಾರ 2022ರ ವೇಳೆ ಪ್ರತೀಯೊಬ್ಬರಿಗೂ ಸ್ವಂತ ಮನೆಯನ್ನು ನೀಡುವ ಗುರಿಯನ್ನು ಹೊಂದಿತ್ತು. ಇದೀಗ ನಾವು ನಮ್ಮ ಅರ್ಧದಷ್ಟು ಪ್ರಯಾಣವನ್ನು ಪೂರ್ಣಗೊಳಿಸಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ಕಾಂಗ್ರೆಸ್ ಹಾಗೂ ಯುಪಿಎ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ ಅವರು, ಹಿಂದಿದ್ದ ಸರ್ಕಾರ ಕೇವಲ 25 ಲಕ್ಷ ಮನೆಗಳನ್ನು ನೀಡಿತ್ತು. ಆದರೆ, ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬಂದ 4 ವರ್ಷಗಳಲ್ಲಿ 1 ಕೋಟಿ 25 ಲಕ್ಷ ಗೃಹಗಳನ್ನು ನಿರ್ಮಾಣ ಮಾಡಿದೆ ಎಂದು ತಿಳಿಸಿದ್ದಾರೆ. 
ಬಳಿಕ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿರೋಧ ಪಕ್ಷಗಳು ವೋಟ್ ಬ್ಯಾಂಕ್ ಮಾಡವುದರಲ್ಲಿ ಕಾರ್ಯನಿರತವಾಗಿವೆ. ಒಂದು ಕುಟುಂಬವನ್ನು ಮಾತ್ರ ಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com