ಶಬರಿಮಲೆ ವಿವಾದ: ಪ್ರಧಾನಿ ಮೋದಿ ಭೇಟಿಯಾಗಲು ಸಜ್ಜಾಗಿದ್ದ ತೃಪ್ತಿ ದೇಸಾಯಿ ಬಂಧನ

ಶಿರಡಿಗೆ ಭೇಟಿ ನೀಡಲು ತೆರಳುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ತಡೆಯಲು ಸಜ್ಜಾಗಿದ್ದ ಹೋರಾಟಗಾರ್ತಿ ತೃಪ್ತಿ ದೇಸಾಯಿಯವರನ್ನು ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ...
ಶಬರಿಮಲೆ ವಿವಾದ: ಪ್ರಧಾನಿ ಮೋದಿ ಭೇಟಿಯಾಗಲು ಸಜ್ಜಾಗಿದ್ದ ತೃಪ್ತಿ ದೇಸಾಯಿ ಬಂಧನ
ಶಬರಿಮಲೆ ವಿವಾದ: ಪ್ರಧಾನಿ ಮೋದಿ ಭೇಟಿಯಾಗಲು ಸಜ್ಜಾಗಿದ್ದ ತೃಪ್ತಿ ದೇಸಾಯಿ ಬಂಧನ
ಪುಣೆ: ಶಿರಡಿಗೆ ಭೇಟಿ ನೀಡಲು ತೆರಳುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ತಡೆಯಲು ಸಜ್ಜಾಗಿದ್ದ ಹೋರಾಟಗಾರ್ತಿ ತೃಪ್ತಿ ದೇಸಾಯಿಯವರನ್ನು ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ. 
ಶಬರಿಮಲೆ ವಿವಾದ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಮಾತುಕತೆ ನಡೆಸಬೇಕೆಂದು ತೃಪ್ತಿ ದೇಸಾಯಿಯವರು ಅಹ್ಮೆದ್ ನಗರದ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. 
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿರಡಿಗೆ ಭೇಟಿ ನೀಡುತ್ತಿದ್ದು, ಶಿರಡಿಗೇ ತೆರಳಿ ಮೋದಿಯವರೊಂದಿಗೆ ಮಾತುಕತೆ ನಡೆಸುತ್ತೇನೆಂದು ಹೇಳಿದ್ದರು. 
ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ತೃಪ್ತಿ ದೇಸಾಯಿ ಹಾಗೂ ಕೆಲ ಮಹಿಳೆಯರನ್ನು ತಡೆದಿರುವ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 
ಶಿರಡಿಗೆ ತೆರಳಲು ಸಿದ್ಧರಾದಾಗ ಪೊಲೀಸರು ಅದಾಗಲೇ ಅಲ್ಲಿ ಹಾಜರಿದ್ದರು. ಪ್ರತಿಭಟಿಸುವುದು ನಮ್ಮ ಸಾಂವಿಧಾನಿಕ ಹಕ್ಕು. ಅದನ್ನು ತಡೆಯುವುದು ತಪ್ಪು. ಪ್ರಧಾನಿ ಮೋದಿಯವರ ಮೂಲಕ ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ತೃಪ್ತಿ ದೇಸಾಯಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com