53 ಸಾವಿರ ಕೋಟಿ ವಂಚಿಸಿದ ಬಳಿಕ 23 ವಂಚಕರು ಭಾರತ ಸರ್ಕಾರದ ಕೃಪೆಯಿಂದ ದೇಶ ತೊರೆದಿದ್ದಾರೆ ಎಂಡು ಅವರು ಆರೋಪಿಸಿದ್ದಾರೆ. ಡೋಲಾಯಮಾನವಾಗಿರುವ ಆರ್ಥಿಕ ಪರಿಸ್ಥಿತಿ, ಬ್ಯಾಂಕಿಂಗ್ ವಂಚನೆಗಳು, ಹಾಗೂ ದೇಶ ತೊರೆಯುವ ವಂಚಕರು ಜೇಟ್ಲಿ ಅವರ 'ನ್ಯೂ ಇಂಡಿಯಾ'ದ ಭಾಗವಾಗಿದ್ದಾರೆ. ಸಚಿವರು ಈಗ ನೈತಿಕ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.