ಶಬರಿಮಲೆ ವಿವಾದ: ಹೋರಾಟಗಾರ್ತಿ ರೆಹಾನ ಫಾತಿಮಾ ವಿರುದ್ಧ ಬಿಎಸ್ಎನ್ಎಲ್ ಶಿಸ್ತುಕ್ರಮ

ಶಬರಿಮಲೆ ದೇಗುಲ ಪ್ರವೇಶಿಸಲು ಪ್ರಯತ್ನಿಸಿದ್ದ ಕೇರಳದ ಮಾನವ ಹಕ್ಕು ಹೋರಾಟಗಾರ್ತಿ ರೆಹಾನ ಫಾತಿಮಾ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿರುವ ಬಿಎಸ್ಎನ್ಎಲ್ ಇದೀಗ ಮತ್ತಷ್ಟು ಕ್ರಮ ಕೈಗೊಳ್ಳುವ ಸುಳಿವನ್ನು ನೀಡಿದೆ...
ಹೋರಾಟಗಾರ್ತಿ ರೆಹಾನ ಫಾತಿಮಾ
ಹೋರಾಟಗಾರ್ತಿ ರೆಹಾನ ಫಾತಿಮಾ
ಕೊಚ್ಚಿ: ಶಬರಿಮಲೆ ದೇಗುಲ ಪ್ರವೇಶಿಸಲು ಪ್ರಯತ್ನಿಸಿದ್ದ ಕೇರಳದ ಮಾನವ ಹಕ್ಕು ಹೋರಾಟಗಾರ್ತಿ ರೆಹಾನ ಫಾತಿಮಾ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿರುವ ಬಿಎಸ್ಎನ್ಎಲ್ ಇದೀಗ ಮತ್ತಷ್ಟು ಕ್ರಮ ಕೈಗೊಳ್ಳುವ ಸುಳಿವನ್ನು ನೀಡಿದೆ. 
ಆಂತರಿಕ ತನಿಖೆ ಬಳಿಕ ಶಿಸ್ತು ಕ್ರಮ ಕೈಗೊಂಡಿರುವ ಬಿಎಸ್ಎನ್ಎಲ್ ಫಾತಿಮಾ ಅವರನ್ನು ಕೊಚ್ಚಿಯ ರವಿಪುರಂ ಬ್ರಾಂಚ್'ಗೆ ವರ್ಗಾವಣೆ ಮಾಡಿದೆ ಎಂದು ತಿಳಿದುಬಂದಿದೆ. 
ರೂಪದರ್ಶಿಯಾಗಿರುವ ಹೋರಾಟಗಾರ್ತಿ ರೆಹಾನ ಅವರು ಎರ್ನಾಕುಲಂ ಮೂಲದವರಾಗಿದ್ದು, ಕೊಟ್ಟಿ ಬೋಟ್ ಜೆಟ್ಟಿ ಬ್ರ್ಯಾಂಚ್'ನಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರಿಗೆ ವರ್ಗಾವಣೆ ಮಾಡಲಾಗಿದ್ದು, ಸಾರ್ವಜನಿಕರೊಂದಿಗೆ ಸಂಪರ್ಕವಿಲ್ಲದ ಪೋಸ್ಟ್ ವೊಂದನ್ನು ನೀಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವಂತಹ ಪೋಸ್ಟ್ ವೊಂದನ್ನು ರೆಹಾನ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆಂದು ಕೇರಳ ಪೊಲೀಸರು ನಿನ್ನೆಯಷ್ಟೇ ರೆಹಾನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. 
ಲಕ್ಷಾಂತರ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ ಹಿನ್ನಲೆಯಲ್ಲಿ ಮುಸ್ಲಿಂ ಸಮುದಾಯ ಈ ಹಿಂದೆ ರೆಹಾನ ಅವರನ್ನು ಕೇರಳ ಮುಸ್ಲಿಂ ಮಮಾತ್ ಮಂಡಳಿಯಿಂದ ಉಚ್ಛಾಟನೆಗೊಳಿಸಿತ್ತು. ಶಬರಿಮಲೆ ಪ್ರವೇಶ ಮಾಡಲು ಯತ್ನ ಮಾಡಿದ ಹಿನ್ನಲೆಯಲ್ಲಿ ಕಳೆದ ಶುಕ್ರವಾರ ರೆಹಾನ ಮನೆಯನ್ನು ಧ್ವಂಸಗೊಳಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com