ಮುಳಗಡೆಯಾದ ಬೋಟ್
ದೇಶ
ಮುಂಬೈ: ಮಹಾ ಸರ್ಕಾರದ ಅಧಿಕಾರಿಗಳಿದ್ದ ಬೋಟ್ ಮುಳುಗಡೆ, 25 ಮಂದಿಯ ರಕ್ಷಣೆ
ಮಹಾರಾಷ್ಟ್ರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳಿದ್ದ ಬೋಟ್ ವೊಂದು ಮುಂಬೈ ...
ಮುಂಬೈ: ಮಹಾರಾಷ್ಟ್ರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳಿದ್ದ ಬೋಟ್ ವೊಂದು ಮುಂಬೈ ಕರಾವಳಿಯಲ್ಲಿ ಮುಳುಗಿದ ಘಟನೆ ಬುಧವಾರ ನಡೆದಿದೆ.
ಉದ್ದೇಶಿತ ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕದ ಸಮೀಪ ಈ ಘಟನೆ ನಡೆದಿದ್ದು, ಬಹುತೇಕ ಎಲ್ಲಾ ಅಧಿಕಾರಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್ ಸಹಾಯದಿಂದ ಬೋಟ್ ನಲ್ಲಿದ್ದ ಎಲ್ಲಾ 25 ಮಂದಿಯನ್ನು ರಕ್ಷಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಶಿವಾಜಿ ಸ್ಮಾರಕ ಸ್ಥಳದಲ್ಲಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಆದರೆ ಘಟನೆ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ