'ಬುಕ್ ಯುವರ್ ಟಿಕೆಟ್' ಎಂದು ಐಆರ್ ಸಿಟಿಸಿ ವೆಬ್ ಸೈಟ್ ನಲ್ಲಿ ಇನ್ನು ಮುಂದೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಿಲ್ದಾಣದ ಹೆಸರು
'ಬುಕ್ ಯುವರ್ ಟಿಕೆಟ್' ಎಂದು ಐಆರ್ ಸಿಟಿಸಿ ವೆಬ್ ಸೈಟ್ ನಲ್ಲಿ ಇನ್ನು ಮುಂದೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಿಲ್ದಾಣದ ಹೆಸರು

ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಇಂಗ್ಲಿಷ್ ವೆಬ್ ಸೈಟ್ ನಿಂದ ಹಿಂದಿ ಭಾಷಾ ಆಯ್ಕೆ ತೆಗೆದುಹಾಕಿದ ರೈಲ್ವೆ ಇಲಾಖೆ

ತಮಿಳುನಾಡು ಸೇರಿದಂತೆ ದೇಶದ ಇತರ ಭಾಗಗಳಲ್ಲಿ ರೈಲ್ವೆ ಪ್ರಯಾಣಿಕರ ವರ್ಗವೊಂದು ತೀವ್ರ ವಿರೋಧ ...

ಚೆನ್ನೈ: ತಮಿಳುನಾಡು ಸೇರಿದಂತೆ ದೇಶದ ಇತರ ಭಾಗಗಳಲ್ಲಿ ರೈಲ್ವೆ ಪ್ರಯಾಣಿಕರ ವರ್ಗವೊಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ರೈಲ್ವೆ ಇಲಾಖೆ ಐಆರ್ ಸಿಟಿಸಿ ಆನ್ ಲೈನ್ ಟಿಕೆಟ್ ಕಾಯ್ದಿರಿಸುವ ಇಂಗ್ಲಿಷ್ ವೆಬ್ ಸೈಟ್ ನಿಂದ ಹಿಂದಿ ಭಾಷೆಯನ್ನು ತೆಗೆದುಹಾಕಿದೆ.

ಕೇಂದ್ರ ರೈಲ್ವೆ ಮಾಹಿತಿ ವ್ಯವಸ್ಥೆಯ(ಸಿಆರ್ ಐಎಸ್) ನ ಅಧಿಕೃತ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ರೈಲ್ವೆಯ ಮಾಹಿತಿ ತಂತ್ರಜ್ಞಾನ ವಿಭಾಗ ಇಂಗ್ಲಿಷ್ ವೆಬ್ ಸೈಟ್ ನಲ್ಲಿ ಹಿಂದಿ ಭಾಷೆಯಲ್ಲಿ ರೈಲ್ವೆ ನಿಲ್ದಾಣದ ಹೆಸರು ಮತ್ತು ಇತರ ಸಾಮಾನ್ಯ ಸೂಚನೆಗಳನ್ನು irctc.co.in ನಿಂದ ತೆಗೆದುಹಾಕಲಾಗಿದೆ.

ಅಂತರ್ಜಾಲದ ಮುಖಪುಟದಲ್ಲಿ ಬುಕ್ ಯುವರ್ ಟಿಕೆಟ್ ಕೆಳಗೆ ಇನ್ನು ಮುಂದೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಿಲ್ದಾಣಗಳ ಹೆಸರು ಕಾಣುತ್ತವೆ. ಉಳಿದಂತೆ ಐಆರ್ ಸಿಟಿಸಿಯ ವೆಬ್ ಸೈಟ್ ನಲ್ಲಿ ಹಿಂದಿ ಭಾಷೆಯಲ್ಲಿ ಬೇರೆಲ್ಲಾ ಮಾಹಿತಿಗಳು ಮೊದಲಿನಂತೆ ಸಿಗುತ್ತವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಟಿಕೆಟ್ ಬುಕ್ ಮಾಡುವ ಮುನ್ನ ಮತ್ತು ಮಾಡಿದ ನಂತರ ಸಾಮಾನ್ಯ ಸಲಹೆಗಳು ಮತ್ತು ಇತರ ಪ್ರಚಾರ ಸಂದೇಶಗಳು ಮುಖಪುಟದಲ್ಲಿ ಇನ್ನು ಮುಂದೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಇರುತ್ತದೆ. ಕಳೆದ ಮೇಯಲ್ಲಿ ಸಿಆರ್ ಐಎಸ್ ನ್ನು ಮೇಲ್ದರ್ಜೆಗೇರಿಸಲಾಗಿತ್ತು. ಐಆರ್ ಸಿಟಿಸಿ ವೆಬ್ ಸೈಟ್ ತ್ವರಿತವಾಗಿ ಕೆಲಸ ಮಾಡಿ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಲು ಅನುಕೂಲ ಕಲ್ಪಿಸಿಕೊಡಲಾಗಿತ್ತು.

ಇಂಗ್ಲಿಷ್ ವೆಬ್ ಸೈಟ್ ನಲ್ಲಿ ಹಿಂದಿ ಭಾಷೆ ಹೇರಿಕೆ ತಮಿಳು ನಾಡು ಸೇರಿದಂತೆ ಹಿಂದಿಯೇತರ ಭಾಷೆ ಮಾತನಾಡುವ ರಾಜ್ಯಗಳ ಜನತೆಗೆ ತೀವ್ರ ಅಸಮಾಧಾನವನ್ನುಂಟುಮಾಡುತ್ತಿತ್ತು. ಇತ್ತೀಚೆಗೆ ರೈಲ್ವೆ ಇಲಾಖೆ ಕಾಯ್ದಿರಿಸದ ಟಿಕೆಟ್ ನಲ್ಲಿ ತಮಿಳು ಮತ್ತು ಮಲಯಾಳಂ ಭಾಷೆಗಳನ್ನು ಮತ್ತೆ ತಂದಿತ್ತು.

Related Stories

No stories found.

Advertisement

X
Kannada Prabha
www.kannadaprabha.com