ಉತ್ತರ ಪ್ರದೇಶ: ಪತಿಗೆ ತನ್ನ ಪಾತಿವ್ರತ್ಯ ಸಾಬೀತು ಪಡಿಸಲು ಮಹಿಳೆಗೆ 'ಅಗ್ನಿ' ಪರೀಕ್ಷೆ !

ಗಂಡನ ಬಗ್ಗೆಗಿನ ತನ್ನ ಪ್ರಾಮಾಣಿಕತೆ ಹಾಗೂ ನಿಷ್ಠೆಯನ್ನು ಸಾಬೀತು ಪಡಿಸಲು ಊರಿನ ಪಂಚಾಯತಿ ಮುಂದೆ ಅಗ್ನಿ ಪರೀಕ್ಷೆ ಕೈಗೊಂಡ ಘಟನೆ ನಡೆದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಕ್ನೋ: ಗಂಡನ ಬಗ್ಗೆಗಿನ ತನ್ನ ಪ್ರಾಮಾಣಿಕತೆ ಹಾಗೂ ನಿಷ್ಠೆಯನ್ನು ಸಾಬೀತು ಪಡಿಸಲು ಊರಿನ ಪಂಚಾಯತಿ ಮುಂದೆ ಅಗ್ನಿ ಪರೀಕ್ಷೆ ಕೈಗೊಂಡ ಘಟನೆ ನಡೆದಿದೆ.
ಕೈಯ್ಯಲ್ಲಿ ಕೆಂಡ ಹಿಡಿದುಕೊಂಡ ಕಾರಣ ಮಹಿಳೆಯ ಕೈ ಸುಟ್ಟು ಹೋಗಿದೆ, ಈ ಹಿನ್ನೆಲೆಯಲ್ಲಿ ಮಥುರಾ ಜಿಲ್ಲೆಯ ಮಹಿಳೆ ತನ್ನ ಗಂಡ ಹಾಗೂ ಆತನ ಆರು ಮಂದಿ ಸಂಬಂಧಿಕರ ವಿರುದ್ಧ ದೂರು ದಾಖಲಿಸಿದ್ದಾಳೆ. ಮಹಿಳೆಯ ನಡತೆ ಬಗ್ಗೆ ಪ್ರಶ್ನಿಸಿಸುತ್ತಿದ್ದರು.
ಗುರುವಾರ ಪ್ರಕರಣ ಬೆಳಕಿಗೆ ಬಂದಿದ್ದು,  ಉತ್ತರ ಪ್ರದೇಶದ ಬ್ರಿಜಿ ಪ್ರದೇಶದ ಮಂಟ್  ನಾಗ್ಲಾ ಬಾರಿ ಗ್ರಾಮದಲ್ಲಿ ಅಕ್ಟೋಬರ್ 19 ರಂದು ಈ ಘಟನೆ ನಡೆದಿದೆ.  18 ತಿಂಗಳ ಹಿಂದೆ ಶಿವಾನಿ ಜೈವೀರ್ ಎಂಬಾತನನ್ನು  ವಿವಾಹವಾಗಿದ್ದಳು. ಶಿವಾನಿ ಅಕ್ಕ ಪುಷ್ಪ ಜೈವೀರ್ ಅಣ್ಣ ಯಶ್ವೀರ್ ಅವರನ್ನು ವಿವಾಹವಾಗಿದ್ದಳು.
ಮದುವೆಯಾದ ಕೆಲ ದಿನಗಳ ನಂತರ ಜೈವೀರ್ ತನ್ನ ಹೆಂಡತಿ ಶಿವಾನಿಗೆ ಬೈಯ್ದು, ಆಕೆಯನ್ನು ಥಳಿಸುತ್ತಿದ್ದನು. ನಂತರ ಜೈವೀರ್ ಗ್ರಾಮದ ಮುಖ್ಯಸ್ಥರಿಗೆ ದೂರು ನೀಡಿ ಆಕೆಗೆ ದೆವ್ವ ಹಿಡಿದಿರುವುದಾಗಿ ಹೇಳಿದ್ದಾರೆ.
ಶಿವಾನಿ ಪಂಚಾಯತಿಗೆ ಬರುವ ಮುನ್ನವೇ ಮಾಂತ್ರಿಕನೊಬ್ಬ ಅಗ್ನಿಪರೀಕ್ಷೆ ಮಾಡುವಂತೆ ಹೇಳಿದ್ದಾನೆ, ಒಂದು ವೇಳೆ ಶಿವಾನಿ ಪವಿತ್ರವಾಗಿದ್ದರೇ ಬೆಂಕಿ ಆಕೆಯನ್ನು ಸುಡುವುದಿಲ್ಲ ಎಂದು ಹೇಳಿದ್ದಾನೆ, ಬಲವಂತವಾಗಿ ಆಕೆಗೆ ಬೆಂಕಿ ಕಂಬಿ ಹಿಡಿಸಿದ್ದಾನೆ, ಇದರಿಂದ ಮಹಿಳೆ ಅಂಗೈ ಗಳು ಸುಟ್ಟು ಹೋಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com