ಎಲ್ಲಾ ಹಿಂದುಗಳೂ ಬಿಜೆಪಿಗೆ ಮತ ಹಾಕಬೇಕು: ರಾಜಸ್ಥಾನ ಸಚಿವ

ಚುನಾವಣೆ ವೇಳೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಜನರು ಧರ್ಮದ ಆಧಾರದ ಮೇಲೆ ಮತಗಳನ್ನು ಹಾಕಬೇಕೆದು ರಾಜಸ್ಥಾನ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಧನ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ...
ರಾಜಸ್ಥಾನ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಧನ್ ಸಿಂಗ್
ರಾಜಸ್ಥಾನ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಧನ್ ಸಿಂಗ್
ಬನ್ಸ್ವಾರ: ಚುನಾವಣೆ ವೇಳೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಜನರು ಧರ್ಮದ ಆಧಾರದ ಮೇಲೆ ಮತಗಳನ್ನು ಹಾಕಬೇಕೆದು ರಾಜಸ್ಥಾನ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಧನ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ. 
ರ್ಯಾಲಿಯೊಂದರಲ್ಲಿ ಮಾತನಾಡಿರುವ ಧನ್ ಸಿಂಗ್ ಅವರು, ರಾಜಸ್ಥಾನದಲ್ಲಿ ಎಲ್ಲಾ ಹಿಂದೂಗಳು ಒಗ್ಗೂಡಿ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು. ಎಲ್ಲಾ ಮುಸ್ಲಿಮರು ಒಗ್ಗೂಡಿ ಕಾಂಗ್ರೆಸ್'ಗೆ ಮತ ಹಾಕುತ್ತಿರುವಾಗ, ಎಲ್ಲಾ ಹಿಂದುಗಳೂ ಕೂಡ ಬಿಜೆಪಿಗೆ ಮತ ಹಾಕಬೇಕು. ಈ ಮೂಲಕ ಪಕ್ಷ ಬಹುಮತದ ಮೂಲಕ ಗೆಲವು ಸಾಧಿಸಲು ಸಹಾಯ ಮಾಡಬೇಕೆಂದು ಹೇಳಿದ್ದಾರೆ. 
ಧನ್ ಸಿಂಗ್ ಅವರ ಹೇಳಿಕೆಗೆ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಅವರು, ಧರ್ಮದ ಆಧಾರದ ಮೇಲೆ ಬಿಜೆಪಿ ಎಂದಿಗೂ ಮತಗಳನ್ನು ಕೇಳಿಲ್ಲ. ಮತದಾರರಿಗೆ ಯಾವುದೇ ಧರ್ಮ ಇರುವುದಿಲ್ಲ. ದೇಶದ ಅಭಿವೃದ್ಧಿಗಾಗಿ ಯಾರು ದುಡಿಯುತ್ತಾರೋ ಅವರಿಗೆ ಮತಗಳನ್ನು ಹಾಕುತ್ತಾರೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com