'ಪಕ್ಷದಲ್ಲಿರುವ ರೌಡಿಗಳ ಹಿನ್ನಲೆಯನ್ನು ಪರಿಶೀಲಿಸಿ, ಆಗ ನಾನೆಷ್ಟು ಹಿರಿಯ ರೌಡಿ ಎಂಬುದು ನಿಮಗೆ ತಿಳಿಯಲಿದೆ. ಕಾಂಗ್ರೆಸ್ ಯಾರಾದರೂ ರೌಡಿ ಶೀಟರ್ ಅನ್ನು ಆಯ್ಕೆ ಮಾಡಿದರೆ, ಅದು ನಾನೇ ಆಗಬೇಕು. ನಾನು ಈಗಾಗಲೇ ಅಪಹರಣ ಹಿಂಸೆ, ಗಲಭೆ, ಕಿರುಕುಳ, ಅವ್ಯವಹಾರದಂತಹ ಪ್ರಕರಣಗಳು ನನ್ನ ಮೇಲಿದೆ. ಆದರೆ ನಾನು ಯಾವುದೇ ಕುಟುಂಬಕ್ಕೆ ಹಾನಿ ಮಾಡಿಲ್ಲ. ಪಕ್ಷಕ್ಕಾಗಿ ನಿಷ್ಟಾವಂತನವಾಗಿ ದುಡಿದಿದ್ದೇನೆ. ಪಕ್ಷದ ನಾಯಕರು ಜಂಗ ರಾಘವ್ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದಾರೆ. ಆತನಂತೆ ನಾನು ಕೊಲೆ ಮಾಡಿಲ್ಲ. ಆತ ಇನ್ನು ಜ್ಯೂನಿಯರ್ ರೌಡಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.