ವೆಂಕಯ್ಯ ನಾಯ್ಡುರಿಗೆ ಸಚಿವ ಸ್ಥಾನ ನೀಡಲು ಅಟಲ್ ಜೀ ಬಯಸಿದ್ದರು: ಪ್ರಧಾನಿ ಮೋದಿ

ಮಾಜಿ ಪ್ರಧಾನಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ವೆಂಕಯ್ಯ ನಾಯ್ಡು ಅವರನ್ನು ಸಚಿವರನ್ನಾಗಿ ಮಾಡಲು ಬಯಸಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ...
ವೆಂಕಯ್ಯ ನಾಯ್ಡು ಬರೆದಿರುವ 'ಮೂವಿಂಗ್ ಆನ್...ಮೂವಿನ್ ಫಾರ್ವರ್ಡ್: ಎ ಇಯರ್ ಇನ್ ಆಫಿಸ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿ ಮೋದಿ
ವೆಂಕಯ್ಯ ನಾಯ್ಡು ಬರೆದಿರುವ 'ಮೂವಿಂಗ್ ಆನ್...ಮೂವಿನ್ ಫಾರ್ವರ್ಡ್: ಎ ಇಯರ್ ಇನ್ ಆಫಿಸ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿ ಮೋದಿ
Updated on: 
ನವದೆಹಲಿ: ಮಾಜಿ ಪ್ರಧಾನಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ವೆಂಕಯ್ಯ ನಾಯ್ಡು ಅವರನ್ನು ಸಚಿವರನ್ನಾಗಿ ಮಾಡಲು ಬಯಸಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ. 
ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಬರೆದಿರುವ 'ಮೂವಿಂಗ್ ಆನ್...ಮೂವಿನ್ ಫಾರ್ವರ್ಡ್: ಎ ಇಯರ್ ಇನ್ ಆಫಿಸ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಮೋದಿಯವರು, ಮಾಜಿ ಪ್ರಧಾನಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ವೆಂಕಯ್ಯ ನಾಯ್ಡು ಅವರನ್ನು ಸಚಿವರನ್ನಾಗಿ ಮಾಡಲು ಬಯಸಿದ್ದರು. ನಾಯ್ಡು ಅವರೂ ಕೂಡ ಗ್ರಾಮೀಣ ಅಭಿವೃದ್ಧಿ ಸಚಿವರಾಗಲು ಬಯಸಿದ್ದರು. ನಾಯ್ಡು ಅವರು ರೈತರ ಹೃದಯದಲ್ಲಿದ್ದಾರೆ. ರೈತರು ಹಾಗೂ ಕೃಷಿ ಕಲ್ಯಾಣಕ್ಕೆ ನಾಯ್ಡು ಅವರು ಬದ್ಧರಾಗಿದ್ದಾರೆಂದು ಹೇಳಿದ್ದಾರೆ. 
ಬಳಿಕ ಮಾತನಾಡಿರುವ ಮನಮೋಹನ್ ಸಿಂಗ್ ಅವರು, ವೆಂಕಯ್ಯ ನಾಯ್ಡು ಅವರು ಉಪ ರಾಷ್ಟ್ರಪತಿಗಳಾಗಿ ಬಂದಿದ್ದು, ಅವರ ರಾಜಕೀಯ ಹಾಗೂ ಆಡಳಿತಾತ್ಮಕತೆಯ ಅನುಭವ ಉಪ ರಾಷ್ಟ್ರಪತಿಗಳ ಕಚೇರಿ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. 
ನಂತರ ಮಾತನಾಡಿದ ವೆಂಕಯ್ಯ ನಾಯ್ಡು ಅವರು, ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಬೆಂಬಲದ ಅಗತ್ಯವಿದೆ. ಹಣಕಾಸು ಸಚಿವಾಲಯದ ಅಧಿಕಾರಿಗಳು ಇಲ್ಲಿದ್ದಾರೆ. ಪ್ರತೀಯೊಬ್ಬರನ್ನೂ ಜಾಗೃಕತೆಯಿಂದ ನೋಡಿಕೊಳ್ಳಬೇಕೆಂಬ ನನ್ನ ಹೇಳಿಕೆಯನ್ನು ಅವರು ಇಷ್ಟಪಡದೇ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ಕೃಷಿ ವಲಯ ಬಂದಾಗ ಪಕ್ಷಪಾತ ಮಾಡಬೇಕಾಗುತ್ತದೆ. ಏಕೆಂದರೆ, ಕೃಷಿ ಕ್ಷೇತ್ರ ತೊರೆಯುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ. 
ಸಂಸತ್ತು ಕಾರ್ಯನಿರ್ವಹಿಸುವ ರೀತಿಯಲ್ಲಿ ಕಾರ್ಯನಿರ್ವಹಿಸದೇ ಇರುವುದಕ್ಕೆ ನನಗೆ ಬೇಸರವಿದೆ. ಎಲ್ಲಾ ವಿಚಾರಗಳಲ್ಲಿಯೂ ದೇಶ ಮುನ್ನಡೆ ಸಾಧಿಸುತ್ತಿದೆ. ವಿಶ್ವ ಬ್ಯಾಂಕ್, ಎಡಿಬಿ, ವಿಶ್ವ ಆರ್ಥಿಕ ವೇದಿಕೆ ದೇಶಕ್ಕೆ ನೀಡುತ್ತಿರುವ ಸಂಖ್ಯೆಗಳನ್ನು ನೋಡಿದರೆ ಸಂತೋಷವಾಗುತ್ತಿದೆ. ಆರ್ಥಿಕ ವೇದಿಕೆಯಲ್ಲಾಗುತ್ತಿರುವ ಬೆಳವಣಿಗೆಗಳಿಗೆ ಪ್ರತೀ ಭಾರತೀಯ ಹೆಮ್ಮೆ ಪಡಬೇಕಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com