ರಕ್ತಪಾತವೇ ಉತ್ತರ: ಪಾಕ್ ಸೇನಾ ಮುಖ್ಯಸ್ಥ ಬಾಜ್ವಾ ಹೇಳಿಕೆಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ಕೇಳಿದ ಶಿವಸೇನೆ

ನೆರೆ ರಾಷ್ಟ್ರ ಪಾಕಿಸ್ತಾನ ನೇರವಾಗಿ ಬೆದರಿಕೆಗಳನ್ನು ಹಾಕುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಶಿವಸೇನೆ ಶನಿವಾರ ತೀವ್ರವಾಗಿ ಕಿಡಿಕಾರಿದೆ...
ಶಿವಸೇನೆ
ಶಿವಸೇನೆ
ನವದೆಹಲಿ: ನೆರೆ ರಾಷ್ಟ್ರ ಪಾಕಿಸ್ತಾನ ನೇರವಾಗಿ ಬೆದರಿಕೆಗಳನ್ನು ಹಾಕುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಶಿವಸೇನೆ ಶನಿವಾರ ತೀವ್ರವಾಗಿ ಕಿಡಿಕಾರಿದೆ. 
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಬಾಜ್ವಾ ಅವರು, ಗಡಿಯಲ್ಲಿ ರಕ್ತಪಾತ ನಡೆಸುತ್ತಿರುವವರ ವಿರುದ್ಧ ರಕ್ತಪಾತದ ಮೂಲಕವೇ ಸೇಡು ತೀರಿಸಿಕೊಳ್ಳುತ್ತೇವೆಂದು ಹೇಳಿದ್ದರು. 
ಈ ಹೇಳಕೆ ಕುರಿತಂತೆ ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ, ಇಸ್ಲಾಮಾಬಾದ್'ನ ಎರಡು ಮುಖ ಸ್ಪಷ್ಟವಾಗಿ ಬಹಿರಂಗಗೊಂಡಿದೆ. ಒಂದೆಡೆ ಪಾಕಿಸ್ತಾನ ನೂತನ ಅಧ್ಯಕ್ಷ ಇಮ್ರಾನ್ ಖಾನ್ ಅವರು ಶಾಂತಿ ಬಗ್ಗೆ ಮಾತನಾಡಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ರಕ್ತಪಾತದ ಬಗ್ಗೆ ಮಾತನಾಡಿದ್ದಾರೆಂದು ಹೇಳಿದೆ. 
ಪಾಕಿಸ್ತಾನ ಸೇನಾ ಮುಖ್ಯಸ್ಥ ಹೇಳಿಕೆಗೆ 56 ಇಂಚಿನ ಎದೆಯುಳ್ಳ ವ್ಯಕ್ತಿ ಕಿಡಿಕಾರಬೇಕು. ಪಾಕಿಸ್ತಾನ ಪ್ರಚೋದನಕಾರಿ ಹೇಳಿಕೆ, ಕದನ ವಿರಾಮ ಉಲ್ಲಂಘನೆ, ಉಗ್ರ ದಾಳಿಗಳನ್ನು ನಡೆಸುತ್ತಿದ್ದರು, ಭಾರತ ಸರ್ಕಾರ ಮಾತ್ರ ಹೇಳಿಕೆ ನೀಡುವುದನ್ನು ಬಿಟ್ಟು ಬೇರಾವುದೇ ಕ್ರಮ ಕೈಗೊಳ್ಳುತ್ತಿಲ್ಲ. 
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಚೀನಾ, ಪಾಕಿಸ್ತಾನ ಮತ್ತು ಕಾಶ್ಮೀರ ವಿಚಾರಗಳು ಬಂದಾಗ ಮಾಜಿ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರನ್ನು ಟೀಕಿಸುತ್ತದೆ. ಆದರೆ, ಇದೀಗ ಅದೇ ಪಕ್ಷ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ತೀವ್ರವಾಗಿ ಕಿಡಿಕಾರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com