ಆರ್'ಎಸ್ಎಸ್'ಗೆ ಭಾರತೀಯ ಸಂವಿಧಾನದ ಮೇಲೆ ನಂಬಿಕೆಯಿಲ್ಲ: ಓವೈಸಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಭಾರತ ಸಂವಿಧಾನದ ಮೇಲೆ ನಂಬಿಕೆಯಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ...
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ
ಹೈದರಾಬಾದ್: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಭಾರತ ಸಂವಿಧಾನದ ಮೇಲೆ ನಂಬಿಕೆಯಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ. 
ಚಿಕಾಗೋದಲ್ಲಿ ಮಾತನಾಡಿದ್ದ ಆರ್'ಎಸ್ಎಸ್ ಮುಖಸ್ಥ ಮೋಹನ್ ಭಾಗವತ್ ಅವರು, ಸಿಂಹ ಒಂಟಿಯಾಗಿದ್ದರೆ, ಕಾಡು ನಾಯಿಗಳು ಆಕ್ರಮಣ ಮಾಡಿ, ಅದನ್ನು ನಾಶ ಮಾಡಲು ಯತ್ನ ನಡೆಸುತ್ತವೆ. ಅದನ್ನು ನಾವು ಮರೆಯಬಾರದು ಎಂದು ಹೇಳಿದ್ದರು. 
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಓವೈಸಿ, ಹಾಗಾದರೆ, ನಾಯಿ, ಸಿಂಹ ಯಾರು? ಭಾರತೀಯ ಸಂವಿಧಾನ ಪ್ರತೀಯೊಬ್ಬರನ್ನು ಮನುಷ್ಯರೆಂದೇ ಹೇಳುತ್ತದೆ. ಯಾರನ್ನು ನಾಯಿ ಅಥವಾ ಸಿಂಹಗಳೆಂದು ಹೇಳಿಲ್ಲ. ಆರ್'ಎಸ್ಎಸ್ ಭಾರತೀಯ ಸಂವಿಧಾನವನ್ನೇ ನಂಬದೇ ಇರುವುದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. 
ಇತರರನ್ನು ನಾಯಿ ಹಾಗೂ ತಮ್ಮನ್ನು ಸಿಂಹವೆಂದು ಹೇಳಿಕೊಳ್ಳುವ ಮೂಲಕ ಆರ್'ಎಸ್ಎಸ್ ವಿಚಿತ್ರ ವಿಚಾರಗಳನ್ನು ಮುಂದಿಡುತ್ತಿದೆ. ಆರ್'ಎಸ್ಎಸ್ ನವರ 90 ವರ್ಷಗಳ ಭಾಷೆಯಿದು. ಈ ಭಾಷೆಯಿಂದ ನನಗೆ ಆಶ್ಚರ್ಯವೇನೂ ಆಗಿಲ್ಲ. ಇಂತಹ ಭಾಷೆಯನ್ನು ಭಾರತೀಯ ಜನರು ತಿರಸ್ಕರಿಸುತ್ತಾರೆಂದು ತಿಳಿಸಿದ್ದಾರೆ.
ಬಳಿಕ 35ಎ ವಿಧಿ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಇದು ಭಾರತೀಯರ ಹಿತಾಸಕ್ತಿಗೆ ಅತ್ಯಂತ ಮುಖ್ಯವಾಗಿದೆ. ಸಂವಿಧಾನದ ವಿಧಿ 35(ಎ) ಉಳಿಸಿಕೊಳ್ಳಬೇಕೆಂದು ಕಾಶ್ಮೀರ ಜನತೆಯೇ ಹೇಳುತ್ತಿದ್ದಾರೆ. 35(ಎ) ವಿಧಿ ಪ್ರಮುಖವಾಗಿದೆ. ಸಂವಿಧಾನದಲ್ಲಿ ಹೀಗೆಯೇ ಮುಂದುವರೆಯಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com