ಸುಪ್ರೀಂಕೋರ್ಟ್ ಹಿರಿಯ ವಕೀಲ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್
ದೇಶ
ರಫೇಲ್ ಒಪ್ಪಂದ ಕುರಿತು ಐಎಎಫ್ ಅಧಿಕಾರಿಗಳ ಮೇಲೆ ಕೇಂದ್ರದಿಂದ ಒತ್ತಡ: ಹಿರಿಯ ವಕೀಲ ಪ್ರಶಾಂತ್ ಭೂಷಣ್
ವಿವಾದಿತ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ಧನಾತ್ಮಕ ಪ್ರತಿಕ್ರಿಯೆ ನೀಡುವಂತೆ ಭಾರತೀಯ ವಾಯುಸೇನೆ ಅಧಿಕಾರಿಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಸುಪ್ರೀಂಕೋರ್ಟ್ ಹಿರಿಯ...
ಅಹ್ಮದಾಬಾದ್: ವಿವಾದಿತ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ಧನಾತ್ಮಕ ಪ್ರತಿಕ್ರಿಯೆ ನೀಡುವಂತೆ ಭಾರತೀಯ ವಾಯುಸೇನೆ ಅಧಿಕಾರಿಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್ ಅವರು ಶನಿವಾರ ಆರೋಪಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ರಫೇಲ್ ಒಪ್ಪಂದ ಹಗರಣ ಬಹಿರಂಗಗೊಳ್ಳುತ್ತಿದ್ದಂತೆಯೇ ಒಪ್ಪಂದ ಸಮರ್ಥಿಸಿಕೊಳ್ಳಲು ಯಾವ ದಾರಿಯೂ ಇಲ್ಲದ ಎನ್'ಡಿಎ ಸರ್ಕಾರ ಇದೀಗ ವಾಯುಸೇನಾಧಿಕಾರಿಗಳ ಮೇಲೆ ಒತ್ತಡ ಹೇರಲು ಆರಂಭಿಸಿದೆ. ರಫೇಲ್ ಒಪ್ಪಂದ ಕುರಿತು ಧನಾತ್ಮಕ ಪ್ರತಿಕ್ರಿಯೆ ನೀಡುವಂತೆ ಅಧಿಕಾರಿಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಹೇಳಿದ್ದಾರೆ.
ಊಹಿಸಿಕೊಳ್ಳಲು ಆಗದಷ್ಟು ದೊಡ್ಡ ಹಗರಣ ಇದಾಗಿದೆ. ಇಂತಹ ದೊಡ್ಡ ರಕ್ಷಣಾ ಹಗರಣವನ್ನು ದೇಶ ಎಂದಿಗೂ ನೋಡಿರಲಿಲ್ಲ. ಬೋಫೋರ್ಸ್ ಹಗರಣ ರೂ.64 ಕೋಟಿಯದ್ದಾಗಿದ್ದರೆ, ಪ್ರಸಕ್ತ ಎನ್'ಡಿಎ ಸರ್ಕಾರದ ಹಗರಣ ರೂ.21,000 ಕೋಟಿಯದ್ದಾಗಿದೆ. ಐಎಎಫ್ ಯುದ್ದ ವಿಮಾನಗಳ ಸಂಖ್ಯೆಯನ್ನು 126ರಿಂದ 36ಕ್ಕೆ ಇಳಿಕೆ ಮಾಡಲು ಪ್ರಧಾನಮಂತ್ರಿಗಳಿಗೆ ಅನುಮತಿ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ