ಎನ್ಆರ್'ಐ ಪತಿಯಿಂದ ವಂಚನೆ: ಮಗುವನ್ನು ನನ್ನ ವಶಕ್ಕೆ ಕೊಡಿಸಿ ಎಂದು ಸುಷ್ಮಾ ಸ್ವರಾಜ್'ಗೆ ಮಹಿಳೆ ಮೊರೆ

ಅನಿವಾಸಿ ಭಾರತೀಯ ಪತಿಯಂದ ವಂಚನೆಗೊಳಗಾದ ಮಹಿಳೆಯೊಬ್ಬರು ತಮ್ಮ ಮಗುವಿನಿಂದ ದೂರಾಗಿದ್ದು, ಸಹಾಯ ಮಾಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮೊರೆ ಹೋಗಿದ್ದಾರೆ...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ಹೈದರಾಬಾದ್: ಅನಿವಾಸಿ ಭಾರತೀಯ ಪತಿಯಿಂದ ವಂಚನೆಗೊಳಗಾದ ಮಹಿಳೆಯೊಬ್ಬರು ತಮ್ಮ ಮಗುವಿನಿಂದ ದೂರಾವಾಗಿದ್ದು, ಸಹಾಯ ಮಾಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮೊರೆ ಹೋಗಿದ್ದಾರೆ. 
2015ರಲ್ಲಿ ವಿವಾಹವಾದ ಬಳಿಕ ಪತಿ ಸಾಕಷ್ಟು ಕಿರುಕುಳ ನೀಡುತ್ತಿದ್ದರು. ಮಗುವನ್ನು ತಮ್ಮೊಂದಿಗೆ ಇರಿಸಿಕೊಂಡ ಪತಿ ಹಾಗೂ ಅವರ ಕುಟುಂಬಸ್ಥರು ಬಲವಂತದಿಂದ ನನ್ನನ್ನು ಭಾರತಕ್ಕೆ ಕಳುಹಿಸಿದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ. 
2016ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದೆ, ಇದಾದ ಬಳಿಕ ಕಿರುಕುಳ ನೀಡಲು ಆರಂಭಿಸಿದ್ದ ಪತಿ ಹಾಗೂ ಅವರ ತಂದೆ ಖಾಲಿ ಪೇಪರ್ ಮೇಲೆ ನನ್ನ ಸಹಿ ಪಡೆದುಕೊಂಡರು. ಬಳಿಕ ನನ್ನ ಮಗುವನ್ನು ನನ್ನಿಂದ ಕಿತ್ತುಕೊಂಡು, ನನ್ನನ್ನು ಅದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಭಾರತಕ್ಕೆ ಕಳುಹಿಸಿದರು. ಇಲ್ಲಿಯವರೆಗೂ ನಾನು ನನ್ನ ಮಗುವನ್ನು ನೋಡಿಲ್ಲ. ಹೈದರಾಬಾದ್'ಗೆ ಬಂದ 1 ತಿಂಗಳ ಬಳಿಕ ಪತಿ ವಿರುದ್ಧ ಸರೂರ್ನಗರ ಪ್ರದೇಶದಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆಂದು ತಿಳಿಸಿದ್ದಾರೆ. 
ಇದೀಗ ನನ್ನ ಮಗು ನನಗೆ ಸಿಗುವಂತೆ ಮಾಡಿ ಎಂದು ಮಹಿಳೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com