ಬೆನ್ನನ್ನೇ ಮೆಟ್ಟಿಲಾಗಿಸಿ ಪ್ರವಾಹ ಸಂತ್ರಸ್ಥರಿಗೆ ನೆರವಾಗಿದ್ದ ಕೇರಳ ಮೀನುಗಾರನಿಗೆ 'ಮಹಿಂದ್ರಾ' ಬಂಪರ್ ಗಿಫ್ಟ್!

ಕೇರಳದಲ್ಲಿ ಸಂಭವಿಸಿದ್ದ ಶತಮಾನದ ಭೀಕರ ಪ್ರವಾಹದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಮಹಿಳೆಯರ ಬೋಟ್ ಹತ್ತಿಸಿಕೊಂಡಿದ್ದ ಮೀನುಗಾರನಿಗೆ ಖ್ಯಾತ ವಾಹನ ತಯಾರಿಕಾ ಸಂಸ್ಥೆ ಮಹಿಂದ್ರಾ ಬಂಪರ್ ಉಡುಗೊರೆ ನೀಡಿದೆ.
ಮಹಿಂದ್ರಾ ಕಾರು ಉಡುಗೊರೆ ಪಡೆದ ಜೈಸೆಲ್
ಮಹಿಂದ್ರಾ ಕಾರು ಉಡುಗೊರೆ ಪಡೆದ ಜೈಸೆಲ್
ತಿರುವನಂತಪುರ: ಕೇರಳದಲ್ಲಿ ಸಂಭವಿಸಿದ್ದ ಶತಮಾನದ ಭೀಕರ ಪ್ರವಾಹದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಮಹಿಳೆಯರ ಬೋಟ್ ಹತ್ತಿಸಿಕೊಂಡಿದ್ದ ಮೀನುಗಾರನಿಗೆ ಖ್ಯಾತ ವಾಹನ ತಯಾರಿಕಾ ಸಂಸ್ಥೆ ಮಹಿಂದ್ರಾ ಬಂಪರ್ ಉಡುಗೊರೆ ನೀಡಿದೆ. 
ಹೌದು.. ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ್ದ ಶತಮಾನದ ಭೀಕರ ಪ್ರವಾಹದ ಸಂದರ್ಭದಲ್ಲಿ ಭಾರತೀಯ ಸೇನೆ, ಎನ್ ಡಿಆರ್ ಎಫ್ ತಂಡ ಹಾಗೂ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನೂರಾರು ಮೀನುಗಾರರು ಕೂಡ ಸ್ವಯಂ ಪ್ರೇರಿತರಾಗಿ ರಕ್ಷಣಾ ಕಾರ್ಯಾಚರಣೆಗೆ ಧುಮುಕಿಸಿದ್ದರು. ಈ ಪೈಕಿ ಜೈಸೆಲ್ ಎಂಬ ಮೀನುಗಾರ ಅಪಾಯದಲ್ಲಿದ್ದ ಮಹಿಳೆಯರನ್ನು ರಕ್ಷಿಸುವ ಸಲುವಾಗಿ ತನ್ನ ಬೋಟ್ ಚಲಾಯಿಸಿದ್ದ. ಅಲ್ಲದೆ ಮಹಿಳೆಯರು ಬೋಟ್ ಹತ್ತಲು ಕಷ್ಟವಾದಾಗ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಮಹಿಳೆಯರಿಗೆ ನೆರವಾಗಿದ್ದ. 
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಅಲ್ಲದೆ ಕೇರಳ ಪ್ರವಾಹ ಸಂಬಂಧ ವಿಶ್ವದ ಗಮನ ಸೆಳೆಯಲು ಈ ವಿಡಿಯೋ ಕೂಡ ನೆರವಾಗಿತ್ತು. ಇದೀಗ ಜೈಸೆಲ್ ಅಪರೂಪದ ಕಾರ್ಯಕ್ಕೆ ಮಹಿಂದ್ರಾ ಸಂಸ್ಥೆ ಫಿದಾ ಆಗಿದ್ದು, ಜೈಸೆಲ್ ಕಾರ್ಯವನ್ನು ಮೆಚ್ಚಿ ಅವರಿಗೆ ಮಹಿಂದ್ರಾ ಸಂಸ್ಥೆ ಹೊಚ್ಚ ಹೊಸ ಮಹೀಂದ್ರಾ ಮರಾಝೊ ಎಂಬ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದೆ. 
ಈ ಹಿಂದೆ ಕೂಡ ಇದೇ ಮಹಿಂದ್ರಾ ಸಂಸ್ಥೆ ಅಥ್ಲೀಟ್ ಮೀರಾಭಾಯಿ ಚಾನು ಅವರಿಗೂ ಉಡುಗೊರೆ ನೀಡಿತ್ತು. ಅಂತೆಯೇ ತನ್ನ ಆಟೋವನ್ನೋ ಮಹಿಂದ್ರಾ ಕಾರಿನಂತೆ ಪರಿವರ್ತಿಸಿದ್ದ ಆಟೋ ರಿಕ್ಷಾ ಚಾಲಕನಿಗೂ ಕಾರು ಉಡುಗೊರೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com