ಉತ್ತರ ಪ್ರದೇಶ: ರಾಸಾಯನಿಕ ಕಾರ್ಖಾನೆಯಲ್ಲಿ ಮೀಥೇನ್ ಗ್ಯಾಸ್ ಸಿಲಿಂಡರ್ ಸ್ಫೋಟ, 6 ಸಾವು, ಹಲವರಿಗೆ ಗಾಯ!

ಉತ್ತರ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಮೀಥೇನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು 6 ಜನರು ಮೃತಪಟ್ಟಿದ್ದು, ಹಲವರಿಗೆ ಗಾಯಗಳುಂಟಾಗಿವೆ.
ಸ್ಫೋಟ (ಸಂಗ್ರಹ ಚಿತ್ರ)
ಸ್ಫೋಟ (ಸಂಗ್ರಹ ಚಿತ್ರ)
Updated on: 
ಉತ್ತರ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಮೀಥೇನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು 6 ಜನರು ಮೃತಪಟ್ಟಿದ್ದು, ಹಲವರಿಗೆ ಗಾಯಗಳುಂಟಾಗಿವೆ. 
ಮೋಹಿತ್ ಪೆಟ್ರೋಕೆಮಿಕಲ್ ಫ್ಯಾಕ್ಟರಿಒಯಲ್ಲಿ ಈ ಘಟನೆ ನಡೆದಿದ್ದು, ಸಿಲಿಂಡರ್ ಸ್ಫೋಟದಿಂದಾಗಿ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದಲ್ಲಿ ಅಗ್ನಿ ಅವಗಢ ಸಂಭವಿಸಿದೆ. ಸೋರುತ್ತಿದ್ದ ಟ್ಯಾಂಕ್ ನ್ನು ಕಾರ್ಮಿಕರು ವೆಲ್ಡ್ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ. 
ಅಗ್ನಿ ಅವಗಢದ ಪರಿಣಾಮ 9 ಜನರಿಗೆ ಗಾಯಗಳಾಗಿದ್ದು 6 ಜನರು ಮೃತಪಟ್ಟಿದ್ದರೆ, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು ಒಳಗೆ ಸಿಲುಕಿರುವವರನ್ನು ರಕ್ಷಿಸಲಾಗುತ್ತಿದೆ. ಬಾಲ್ಗೋವಿಂದ್, ರವಿ, ಲೋಕೆಂದ್ರ, ಕಮಲ್ವೀರ್, ವಿಕ್ರಂಟ್ ಮತ್ತು ಚೆಟ್ರಾಮ್ ಮೃತ ದುರ್ದೈವಿಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com