ಪೆಟ್ರೋಲ್ ಇಲ್ಲದೇ 150 ಕಿ.ಮೀ ಚಲಿಸುವ ವಿಶೇಷ 'ಮೋದಿ ಬೈಕ್', ಕಲ್ಪನೆಯಲ್ಲ.. ಇದು ಸತ್ಯ!

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರಿರುವ ಈ ಹೊತ್ತಿನಲ್ಲಿ ಪೆಟ್ರೋಲೇ ಇಲ್ಲದೇ ಬರೊಬ್ಬರಿ 150 ಕಿ.ಮೀ ಸಾಗುವ ನೂತನ ಬೈಕ್ ವೊಂದನ್ನು ಮೀರತ್ ನ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕಂಡು ಹಿಡಿದಿದ್ದಾನೆ.
ಮೋದಿ ಬೈಕ್
ಮೋದಿ ಬೈಕ್
ಮೀರತ್: ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರಿರುವ ಈ ಹೊತ್ತಿನಲ್ಲಿ ಪೆಟ್ರೋಲೇ ಇಲ್ಲದೇ ಬರೊಬ್ಬರಿ 150 ಕಿ.ಮೀ ಸಾಗುವ ನೂತನ ಬೈಕ್ ವೊಂದನ್ನು ಮೀರತ್ ನ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕಂಡು ಹಿಡಿದಿದ್ದಾನೆ.
ಈ ವಿಶೇಷ ಬ್ಯಾಟರಿ ಚಾಲಿತ ಇ-ಬೈಕ್ ಅನ್ನು ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿ ವಕಾರ್ ಅಹಮದ್ ಸಂಶೋಧಿಸಿದ್ದು, ಈ ವಿಶೇಷ ಬೈಕ್ ಗೆ 'ಮೋದಿ ಬೈಕ್' ಎಂದು ನಾಮಕರಣ ಮಾಡಿದ್ದಾನೆ. ಸ್ವತಃ ಮೆಕಾನಿಕಲ್ ಎಂಜಿನಿಯಪ್ ಆಗಿರುವ ವಕಾರ್ ಅಹ್ಮದ್ ಗೆ ವಿಶೇಷವಾದದ್ದು ಸಾಧಿಸಬೇಕು ಎನ್ನುವ ಹಂಬಲ. ಇದೇ ಕಾರಣಕ್ಕೆ ತನ್ನ ವಿದ್ಯಾಭ್ಯಾಸವನ್ನೇ ಬಂಡವಾಳವಾಗಿಸಿಕೊಂಡು ವಿಶೇಷ ಇ-ಬೈಕ್ ಆವಿಷ್ಕರಣೆಗೆ ಮುಂದಾಗಿದ್ದಾನೆ.
ತನ್ನ ನಿರಂತರ ಪರಿಶೋಧನೆ ಮತ್ತು ಪರಿಶ್ರಮದ ಫಲವಾಗಿ ವಕಾರ್ ಇದೀಗ ವಿಶೇಷ ಬೈಕ್ ತಯಾರಿಸಿದ್ದು, ಈ ಬ್ಯಾಟರಿ ಚಾಲಿತ ಬೈಕ್ ಅನ್ನು 3 ಗಂಟೆ ಚಾರ್ಜ್ ಮಾಡಿದರೆ ಸಾಕು ಬರೊಬ್ಬರಿ 150 ಕಿ.ಮೀ ಚಲಿಸಲಿದೆ. ಪ್ರಸ್ತುತ ಆಟೋ ಮೊಬೈಲ್ ಇಂಜಿನಿಯರಿಂಗ್ ಮಾಡುತ್ತಿದ್ದ ಯುವಕ ಕಂಡುಹಿಡಿದ ಬೈಕ್ ಈಗ ರಸ್ತೆಯಲ್ಲಿ ಸುತ್ತಾಡುತ್ತಿದ್ದು, ಪೆಟ್ರೋಲ್ ಇಲ್ಲದೇ ಚಲಿಸುತ್ತಿರುವ ಬೈಕ್ ನೋಡಿ ಜನ ಅಚ್ಚರಿ ಪಡುತ್ತಿದ್ದಾರೆ. 
ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಬೈಕ್ ಸಂಶೋಧಕ ವಕಾರ್ ಅಹ್ಮದ್, 'ಈ ಬೈಕ್‌ ಗೆ  ಇಂಜಿನ್ ಇಲ್ಲ. ಲ್ಯಾಟ್ ಟಾಪ್ ಅಥವಾ ಮೊಬೈಲ್ ರೀತಿ ಜಾರ್ಜ್ ಹಾಕಬೇಕು. ಮೂರು ಗಂಟೆ ಜಾರ್ಜ್  ಮಾಡಿದರೆ 150 ಕಿಮೀ ಸಂಚಾರ ಸಾಧ್ಯ. ಇದಕ್ಕೆ ಕೇವಲ  20 ರೂ. ಖರ್ಚು ತಗಲುತ್ತದೆ! ಅಂದರೆ ಕೇವಲ 20 ರೂ. ವೆಚ್ಚದಲ್ಲಿ 150 ಕಿ ಮೀ ಪ್ರಯಾಣ ಮಾಡಬಹುದು. ನನಗೆ ಪ್ರಧಾನಿ ಮೋದಿ ಎಂದರೆ ಅಚ್ಚು ಮೆಚ್ಚು ಹೀಗಾಗಿ ಈ ವಿಶೇಷ ಬೈಕ್ ಗೆ ಮೋದಿ ಬೈಕ್ ಎಂದು ನಾಮಕರಣ ಮಾಡಿದ್ದೇನೆ. ಈ ಬೈಕ್ ದರ  70 ರಿಂದ 75 ಸಾವಿರ ರೂ. ಆಗಲಿದ್ದು ಮಾರುಕಟ್ಟೆಗೆ ತರುವ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೇ ಈ ಸಂಬಂಧ ಹಲವು ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಶೀಘ್ರ ಒಪ್ಪಂದ ಮಾಡಿಕೊಂಡು ಈ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com