ಮಾನವ ಅಭಿವೃದ್ಧಿ ಸೂಚ್ಯಂಕ: ಒಂದು ಸ್ಥಾನ ಮೇಲೇರಿದ ಭಾರತ

ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಭಾರತ130ನೇ ಸ್ಥಾನ ಪಡೆಯುವ ಮೂಲಕ ಒಂದು ಸ್ಥಾನ ಜಿಗಿತ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಭಾರತ130ನೇ ಸ್ಥಾನ ಪಡೆಯುವ ಮೂಲಕ ಒಂದು ಸ್ಥಾನ ಜಿಗಿತ ಕಂಡಿದೆ. 
ಕಳೆದ ವರ್ಷ 131ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದೆ.
2017ನೇ ಸಾಲಿನಲ್ಲಿ ಒಟ್ಟು 189 ದೇಶಗಳಲ್ಲಿ ಸಮೀಕ್ಷೆ ನಡೆಸಿ ಮಾನವ ಅಭಿವೃದ್ಧಿ ಸೂಚ್ಯಂಕ ಸಿದ್ಧಪಡಿಸಲಾಗಿದ್ದು, ಭಾರತ ಮಾನವ ಅಭಿವೃದ್ಧಿ ವಿಭಾಗದಲ್ಲಿ ಮಧ್ಯಮ ಪ್ರಗತಿ ಸಾಧಿಸಿದ ದೇಶಗಳ ಸಾಲಿಗೆ ಸೇರಿದೆ. 
ದಕ್ಷಿಣ ಏಷ್ಯಾದಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಸೂಚ್ಯಂಕ ಗಣನೀಯವಾಗಿ ಏರಿಕೆಯಾಗಿದ್ದು, ಬಾಂಗ್ಲಾದೇಶ 136, ಪಾಕಿಸ್ತಾನ 150ನೇ ಸ್ಥಾನ ಪಡೆದಿವೆ. 
ನಾರ್ವೆ, ಸ್ವಿಜರ್‌ಲೆಂಡ್‌, ಆಸ್ಟ್ರೇಲಿಯಾ, ಐಸ್‌ಲ್ಯಾಂಡ್‌, ಜರ್ಮನಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಸೆಂಟ್ರಲ್‌ ಆಫ್ರಿಕಾ ರಿಪಬ್ಲಿಕನ್‌ನ ನಿಗರ್‌, ದಕ್ಷಿಣ ಸೂಡಾನ್‌, ಚಾದ್‌ ಮತ್ತು ಬುರಾಂಡಿ ದೇಶಗಳು ಅತಿ ಕಡಿಮೆ ಸೂಚ್ಯಂಕ ಪಡೆದು ಕೊನೆಯ ಸಾಲಿನಲ್ಲಿದೆ. 
ಈ ಮಧ್ಯೆ, ಭಾರತದಲ್ಲಿ ಅಸಮೋತಲನ ಇರುವುದರಿಂದ ಸೂಚ್ಯಂಕದ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆಯ ವರದಿ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com