ದಾವೂದಿ ಬೊಹರಾ ದೇಶಪ್ರೇಮ ದೇಶಕ್ಕೆ ಉದಾಹರಣೆ: ಪ್ರಧಾನಿ ಮೋದಿ

ದಾವೂದಿ ಬೊಹರಾ ದೇಶಪ್ರೇಮ ಇಡೀ ಭಾರತ ದೇಶಕ್ಕೆ ಉದಾಹರಣೆಯಾಗಿದ್ದು, ಶಾಂತಿ ಸಂದೇಶದೊಂದಿಗೆ ಬೊಹರಾ ಸಮಾಜ ಜೀವನ ನಡೆಸುತ್ತಿದೆ ಎಂದು ಶುಕ್ರವಾರ ಹೇಳಿದ್ದಾರೆ...
ಮಧ್ಯಪ್ರದೇಶದ ಇಂದೋರ್'ನ ಸೈಫಿ ಮಸೀದಿಯಲ್ಲಿ ದಾವೂದಿ ಬೊಹರಾ ಸಮುದಾಯದ ಸಭೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಇಂದೋರ್'ನ ಸೈಫಿ ಮಸೀದಿಯಲ್ಲಿ ದಾವೂದಿ ಬೊಹರಾ ಸಮುದಾಯದ ಸಭೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ
ಇಂದೋರ್: ದಾವೂದಿ ಬೊಹರಾ ದೇಶಪ್ರೇಮ ಇಡೀ ಭಾರತ ದೇಶಕ್ಕೆ ಉದಾಹರಣೆಯಾಗಿದ್ದು, ಶಾಂತಿ ಸಂದೇಶದೊಂದಿಗೆ ಬೊಹರಾ ಸಮಾಜ ಜೀವನ ನಡೆಸುತ್ತಿದೆ ಎಂದು ಶುಕ್ರವಾರ ಹೇಳಿದ್ದಾರೆ. 
ಮಧ್ಯಪ್ರದೇಶದ ಇಂದೋರ್'ನ ಸೈಫಿ ಮಸೀದಿಯಲ್ಲಿ ದಾವೂದಿ ಬೊಹರಾ ಸಮುದಾಯದ ಸಭೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿಯವರು, ಬೊಹರಾ ಸಮಾಜವನ್ನು ಕೊಂಡಾದಿದ್ದಾರೆ. 
ಸಭೆಯಲ್ಲಿ ಮಾತನಾಡಿದ ಮೋದಿಯವರು ರಾಷ್ಟ್ರ ನಿರ್ಮಾಣಕ್ಕಾಗಿ ನನಗೆ ಅವಕಾಶ ನೀಡಿದ್ದೀರಿ. ನನ್ನ ಪ್ರತಿ ಹೆಜ್ಜೆಗೂ ಬೊಹರಾ ಸಮುದಾಯ ಹೆಗಲು ನೀಡಿದೆ. ನಿಮ್ಮೆಲ್ಲರ ನಡುವೆ ಬರುವುದುನನಗೆ ಹೊಸ ಅನುಭವವನ್ನು ನೀಡುತ್ತಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಜನತೆಗೆ ಧನ್ಯವಾದಗಳನ್ನು ಹೇಳುತ್ತೇನೆ. ಈ ಪವಿತ್ರ ಸಂದರ್ಭದಲ್ಲಿ ನನಗೆ ಇಲ್ಲಿಗೆ ಬರಲು ಅವಕಾಶ ನೀಡಿದ್ದೀರಿ. ಇಮಾಂ ಹುಸೇನರ ಪವಿತ್ರ ಸಂದೇಶವನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದ್ದಾರೆ. 
ಬೊಹರಾ ಸಮಾಜದ ಆಲೋಚನೆ ದೇಶವನ್ನು ಮತ್ತಷ್ಟು ಸದೃಢಗೊಳಿಸುತ್ತದೆ. ಗುಜರಾತ್ ರಾಜ್ಯದಲ್ಲಿ ಪ್ರಕೃತಿ ವಿಕೋಪದ ವೇಳೆ ಅಗತ್ಯ ಸಹಕಾರ ನೀಡುವ ಮೂಲಕ ಬೊಹರಾ ಸಮುದಾಯ ಸಾಕಷ್ಟು ಬೆಂಬಲ ನೀಡಿದೆ. ಈ ಸಮುದಾಯ ವಿಶ್ವವೇ ಒಂದು ಕುಟುಂಬವೆಂದು ಭಾವಿಸಿದೆ ಎಂದು ಹೊಗಳಿದ್ದಾರೆ. 
ಬಡವರು ಹಾಗೂ ಮಧ್ಯಮವರ್ಗದ ಪರ ನಮ್ಮ ಸರ್ಕಾರವಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಲಕ್ಷಾಂತರ ಜನರಿಗೆ ಉಪಯೋಗವಾಗಿದೆ. ದೇಶದ ಬಡವರಿಗೆ, ಮಧ್ಯಮ ವರ್ಗದವರಿಗೆ ಆರೋಗ್ಯಕ್ಕಾಗಿ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. 
ಯುರೋಪ್ ಜನಸಂಖ್ಯೆಯಷ್ಟೇ ಭಾರತದಲ್ಲಿಯೂ ಈ ಯೋಜನೆ ಪ್ರಯೋಜನಕಾರಿಯಾಗಿದೆ. ವರ್ಷಕ್ಕೆ 5 ಲಕ್ಷದಂತೆ ಬಡವರಿಗೆ ಚಿಕಿತ್ಸೆಗೆ ಮೀಸಲಿಡಲಾಗಿದೆ. ಆರೋಗ್ಯ ವಿಚಾರದಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಪರಿಚಯಿಸಿದೆ. 2022ರೊಳಗೆ ಪ್ರತಿಯೊಬ್ಬರಿಗೂ ಮನೆ ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಪೋಷಣೆ ಹಾಗೂ ಆರೋಗ್ಯ ಸೇವೆಗಳ ಜೊತೆಗೆ ಮನೆಯನ್ನೂ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಬಯಲು ಶೌಚಾಲಯದಿಂದ ಜನರನ್ನು ಮುಕ್ತಗೊಳಿಸಿದ್ದೇವೆ. ಇಂದೋರಿನಲ್ಲಿ ಸ್ವಚ್ಛ ಭಾರತ್ ಯೋಜನೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. 
ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ವಿಚಾರಗಳಲ್ಲಿ ನಿಮ್ಮ ಪ್ರಯತ್ನಗಳು ಶ್ಲಾಘನೀಯ. ದಾವೂದಿ ಬೊರಹಾ ಸಮುದಾಯದ ಜೊತೆ ಬರಲು ಉತ್ಸುಕನಾಗಿದ್ದೇನೆ. ಶಿಕ್ಷಣ, ಕೌಶಲ್ಯಾಭಿವೃದ್ಧಿಗೂ ನಿಮ್ಮ ಸಮುದಾಯ ಕೈಜೋಡಿಸಿದೆ. ಹೃದಯ ಹಾಗೂ ಮನಸ್ಸನ್ನು ಸ್ವಚ್ಛ ಮಾಡಬೇಕಾಗಿದೆ ಎಂದು 
ಶಿಕ್ಷಣ ಹಾಗೂ ಸ್ಕಿಲ್ ಡೆವಲಪ್ ಮೆಂಟ್ ವಿಚಾರದಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ. ದಾವೂದಿ ಬೊಹರಾ ಸಮುದಾಯದ ಜತೆ ಬರಲು ಪ್ರೇರಣೆ ಯಾಗಿದೆ. ಶಿಕ್ಷಣ, ಕೌಶಲ್ಯಾಭಿವೃದ್ದಿಗೂ ನಿಮ್ಮ ಸಮುದಾಯ ಕೈಜೋಡಿಸಿದೆ ಹೃದಯ ಮತ್ತು ಮನಸ್ಸನ್ನು ಇಂದು ಸ್ವಚ್ಛ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com