ಮಲ್ಯ ಪರಾರಿಯಾಗಲು ಪ್ರಧಾನಿ 'ನೆಚ್ಚಿನ' ಸಿಬಿಐ ಅಧಿಕಾರಿಯಿಂದಲೇ ಅವಕಾಶ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರಮೋದಿ ಅವರ ನೆಚ್ಚಿನ ಸಿಬಿಐ ಅಧಿಕಾರಿ ದೇಶಭ್ರಷ್ಟ ಮದ್ಯ ಉದ್ಯಮಿ ವಿಜಯ್ ಮಲ್ಯ ವಿರುದ್ಧದ 'ಲುಕ್ ಔಟ್ ನೋಟಿಸ್ ' ದುರ್ಬಲಗೊಳಿಸುವ ಮೂಲಕ ವಿದೇಶಕ್ಕೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರಮೋದಿ ಅವರ ನೆಚ್ಚಿನ ಸಿಬಿಐ ಅಧಿಕಾರಿ  ದೇಶಭ್ರಷ್ಟ ಮದ್ಯ ಉದ್ಯಮಿ ವಿಜಯ್ ಮಲ್ಯ ವಿರುದ್ಧದ  'ಲುಕ್ ಔಟ್ ನೋಟಿಸ್ ' ದುರ್ಬಲಗೊಳಿಸುವ  ಮೂಲಕ  ವಿದೇಶಕ್ಕೆ ಪರಾರಿಯಾಗಲು  ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಆರೋಪಿಸಿದ್ದಾರೆ.

ಗುಜರಾತ್ ಕೆಡರ್ ಸಿಬಿಐ  ಅಧಿಕಾರಿ ಎ. ಕೆ. ಶರ್ಮಾ  ಮಲ್ಯ ವಿರುದ್ಧದ ಲುಕ್ ಔಟ್ ನೋಟಿಸ್ ದುರ್ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಸಂದೇಶ ಹಾಕಿದ್ದಾರೆ.

ವಜ್ರ ಉದ್ಯಮಿಗಳಾದ  ನಿರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸಹ ವಿದೇಶಕ್ಕೆ ಪರಾರಿಯಾಗುವಲ್ಲಿ ಇದೇ ಅಧಿಕಾರಿ  ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು  ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ  ವಂಚಿಸಿದ ನಂತರ ವಿಜಯ್ ಮಲ್ಯ ವಿದೇಶಕ್ಕೆ ಹಾರಲು ಅರುಣ್ ಜೇಟ್ಲಿ ಹಾಗೂ ನರೇಂದ್ರಮೋದಿ ನೆರವು ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದು, ಈ ಸಂಬಂಧ ಅರುಣ್ ಜೇಟ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಮಲ್ಯ ಪರಾರಿ ಪ್ರಕರಣ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com