ಕೊಲ್ಕಾತ್ತಾ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ
ಕೊಲ್ಕಾತ್ತಾ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ

ಕೋಲ್ಕೊತ್ತಾ ಬಗ್ರಿ ಮಾರ್ಕೆಟ್ ನಲ್ಲಿ ಭಾರಿ ಬೆಂಕಿ ಅವಘಡ: ಬೆಂಕಿ ನಂದಿಸಲು ಹರಸಾಹಸ

: ಕೊಲ್ಕೊತ್ತಾದ ಬಗ್ರಿ ಮಾರ್ಕೆಟ್‌ ಪ್ರದೇಶದಲ್ಲಿ ಭಾನುವಾರ ನಸುಕಿನ ವೇಳೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ 30 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ...
ಕೊಲ್ಕೊತಾ: ಕೊಲ್ಕೊತ್ತಾದ ಬಗ್ರಿ ಮಾರ್ಕೆಟ್‌ ಪ್ರದೇಶದಲ್ಲಿ ಭಾನುವಾರ ನಸುಕಿನ ವೇಳೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ 30 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಆಗಮಿಸಿವೆ.
ಸಗಟು ವ್ಯಾಪಾರ ಮಾರುಕಟ್ಟೆಯಲ್ಲಿ ಸುಮಾರು 400 ವ್ಯವಹಾರ ಸಂಸ್ತೆಗಳಿದ್ದು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ತಹಬದಿಗೆ ತರಲು ಹರಸಾಹಸ ಪಡುತ್ತಿದ್ದಾರೆ. 
ನಸುಕಿನ 2.45 ರ ವೇಳೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದೆ, ಹಲವು ಮಹಡಿಗಳುಳ್ಳ ಈ ಕಟ್ಟಡದಲ್ಲಿ ಹೆಚ್ಚಿನದಾಗಿ ಮೆಡಿಸನ್ ಮತ್ತು ಸುಗಂದ ಧ್ರವ್ಯ ಅಂಗಡಿಗಳಿವೆ.
ತುಂಬಾ ಚಿಕ್ಕದಾದ ಈ ಪ್ರದೇಶದಲ್ಲಿ  ಕೆಲಸ ಮಾಡುವುದು ಕಷ್ಟವಾಗಿದೆ, ನಾವು ಹೈಟ್ರೋಲಿಕ್ ಏಣಿ ಬಳಸಿ ಗ್ಯಾಸ್ ಕಟ್ಟರ್ ಮೂಲಕ ಗ್ರಿಲ್ ಗಳನ್ನು ಕತ್ತರಿಸಿ ಕಟ್ಟಡದೊಳಗೆ ಪ್ರವೇಶ ಪಡೆದಿದ್ದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ,
ಸತತ ಆರು ಗಂಟೆ ಕಾರ್ಯಾಚರಣೆ ನಡೆಸಿದರೂ ಬೆಂಕಿ ನಂದಿಸಲೂ ಇನ್ನೂ ಹರಸಾಹಸ ಪಡುತ್ತಿದ್ದರೂ ಇನ್ನೂ ನಂದಿಸಲು ಸಾಧ್ಯವಾಗುತ್ತಿಲ್ಲ, ಬೆಂಕಿಯ ಜ್ವಾಲೆ ಎಲ್ಲೆಡೆ ಹರಡುತ್ತಿದೆ, ಇದುವರೆಗೂ ಯಾವುದೇ ಪ್ರಾಣಾಪಾಯ ಆಗಿರುವ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com