ರೂ.9,1000 ಕೋಟಿ ಮೌಲ್ಯದ ರಕ್ಷಣಾ ಸಾಮಾಗ್ರಿ ಖರೀದಿಗೆ ಕೇಂದ್ರ ಅಸ್ತು

ರೂ.9,100 ಕೋಟಿ ಮೌಲ್ಯದ ರಕ್ಷಣಾ ಸಾಮಾಗ್ರಿ ಖರೀದಿ ಮಾಡಲು ಕೇಂದ್ರ ಸರ್ಕಾರ ಮಂಗಳವಾರ ಒಪ್ಪಿಗೆ ನೀಡಿದೆ...
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: ರೂ.9,100 ಕೋಟಿ ಮೌಲ್ಯದ ರಕ್ಷಣಾ ಸಾಮಾಗ್ರಿ ಖರೀದಿ ಮಾಡಲು ಕೇಂದ್ರ ಸರ್ಕಾರ ಮಂಗಳವಾರ ಒಪ್ಪಿಗೆ ನೀಡಿದೆ. 
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಇಂದು ನಡೆದ ಡಿಫೆನ್ಸ್ ಆಕ್ವಿಝಿಶನ್ ಕೌನ್ಸಿಲ್ (ಡಿಎಸಿ) ಸಭೆಯಲ್ಲಿ ರೂ.9,100 ಕೋಟಿ ಮೌಲ್ಯದ ಸಾಮಾಗ್ರಿಗಳನ್ನು ರಕ್ಷಣಾ ಪಡೆಗಳಿಗಾಗಿ ಖರೀದಿ ಮಾಡಲು ಅನುಮೋದನೆ ನೀಡಲಾಯಿತು. 
ರೂ.9,100 ಕೋಟಿಯಲ್ಲಿ ದೇಶೀಕರಣ ಮತ್ತು ಸ್ವಾವಲಂಬನೆಯ ಗುರಿಯೊಂದಿಗೆ ರಕ್ಷಣಾ ಸಾಮಾಗ್ರಿಗಳನ್ನು ಖರೀದಿ ಮಾಡಲಾಗುತ್ತದೆ. ಇದಲ್ಲದೆ, ಭಾರತ್ ಡೈನಾಮಿಕ್ಸ್ ಲಿಮಿಟೆಡ್'ನಿಂದ 2 ರಿಜಿಮೆಂಟ್ ಗಳಿಗೆ ಆಕಾಶ್ ಮಿಸೈಲ್ ಸಿಸ್ಟಮ್ ಹಾಗೂ ಇತರ ಶಕ್ತಿಶಾಲಿ ರಕ್ಷಣಾ ಸಾಮಾಗ್ರಿಗಳನ್ನು ಖರೀದಿ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com