ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಬರೇಲಿ, ಬದೌನ್, ಹಾರ್ದೊಯ್, ಸಿತಾಪೂರ್, ಬಹ್ರಾಯ್ಚ್ ಮತ್ತು ಷಹಜಹಾನ್ಪುರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ಶಂಕಿತ ಜ್ವರಕ್ಕೆ ಈ ವರೆಗೂ ಬರೇಲಿಯಲ್ಲಿ 24 ಮಂದಿ ಸಾವನ್ನಪ್ಪಿದ್ದರೆ, ಬದೌನ್ ಜಿಲ್ಲೆಯಲ್ಲಿ 23 ಮಂದಿ ಸಾವಿಗೀಡಾಗಿದ್ದಾರೆ. ಇದಲ್ಲದೇ ರಾಜ್ಯದಲ್ಲಿ ಈ ಜ್ವರದ ಲಕ್ಷಣಗಳಿರುವ ಸಾಕಷ್ಟು ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.