ರಾಫೆಲ್ ಒಪ್ಪಂದ ಸಂಬಂಧ ಸರ್ಕಾರ ತನ್ನ ತಪ್ಪಿಲ್ಲ ಎಂಬುದನ್ನು ಸಾಬೀತು ಪಡಿಸಬೇಕು: ಶತೃಘ್ನ ಸಿನ್ಹಾ

ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಕೇಂದ್ರ ಸರ್ಕಾರ ತಾನು ಶುದ್ಧ ಹಸ್ತ ಎಂಬುದನ್ನು ಸಾಬೀತು ಪಡಿಸಬೇಕು ಎಂದು ಹಿರಿಯ ಬಿಜೆಪಿ ಮುಖಂಡ ಶತೃಘ್ನಸಿನ್ಹಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಕೇಂದ್ರ ಸರ್ಕಾರ ತಾನು ಶುದ್ಧ ಹಸ್ತ ಎಂಬುದನ್ನು ಸಾಬೀತು ಪಡಿಸಬೇಕು ಎಂದು ಹಿರಿಯ ಬಿಜೆಪಿ ಮುಖಂಡ ಶತೃಘ್ನಸಿನ್ಹಾ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾತನಾಡಿದ ಶತೃಘ್ನ ಸಿನ್ಹಾ, ರಾಫೆಲ್ ಒಪ್ಪಂದ ಸಂಬಂಧ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರು ನೀಡಿರುವ ಹೇಳಿಕೆ ಗಂಭೀರವಾದದ್ದು. ಅಂತೆಯೇ ರಾಫೆಲ್ ಒಪ್ಪಂದ ಸಂಬಂಧ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೇಳಿಕೆ ಕೊಟ್ಟಿರುವುದು ಕೇವಲ ಫ್ರಾನ್ಸ್ ಮಾಜಿ ಅಧ್ಯಕ್ಷರು ಮಾತ್ರವಲ್ಲ. ಬದಲಿಗೆ ರಾಫೆಲ್ ಒಪ್ಪಂದಕ್ಕೆ ಸಹಿ ಹಾಕಿದ ವ್ಯಕ್ತಿ. ಹೀಗಾಗಿ ಅವರ ಹೇಳಿಕೆ ಗಂಭೀರತೆ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಅಂತೆಯೇ ಕೇಂದ್ರ ಸರ್ಕಾರ ಈ ಬಗ್ಗೆ ತಾನು ಶುದ್ಧಹಸ್ತ ಎಂಬುದನ್ನು ಸಾಬೀತು ಪಡಿಸಬೇಕು. ಅಂತೆಯೇ ಅನುಭವಿ ಹೆಚ್ಎಲ್ ಅನ್ನು ಪಕ್ಕಕ್ಕಿಟ್ಟು, ಅನನುಭವಿ ರಿಲಯನ್ಸ್ ಅನ್ನು ಒಪ್ಪಂದಕ್ಕೆ ಸೇರಿಸಿಕೊಂಡಿದ್ದೇಕೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಿನ್ಹಾ ಹೇಳಿದ್ದಾರೆ. 
ಅಂತೆಯೇ ಬಿಜೆಪಿ ಪಕ್ಷದ ಸಂಸದರಾಗಿದ್ದುಕೊಂಡು ತಮ್ಮದೇ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದರ ಕುರಿತು ಮಾತನಾಡಿದ ಸಿನ್ಹಾ, ನನ್ನನ್ನು ರೆಬೆಲ್ ಎಂದು ಕರೆಯುತ್ತಾರೆ. ಆದರೆ ಸತ್ಯ ಮಾತನಾಡುವುದಕ್ಕೆ ನಾನು ಭಯಪಡುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com